

ಮಂಗಳೂರು : ಕನ್ನಡ ರಾಜ್ಯೋತ್ಸವ ಸಮಿತಿ ಮತ್ತು ಕಲ್ಕೂರ ಪ್ರತಿಷ್ಠಾನ ಏರ್ಪಡಿಸುವ ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ರಾಜ್ಯೋತ್ಸವ ಕವಿಗೋಷ್ಠಿಗೆ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಕನ್ನಡ ನಾಡು , ನುಡಿ, ಸಂಸ್ಕೃತಿ, ಪರಿಸರ ಸಹಿತ ಪ್ರಸ್ತುತ ವಿದ್ಯಮಾನ ಹಾಗೂ ರಾಷ್ಟ್ರೀಯತೆ ವಿಷಯಾಧಾರಿತ ಕವನಗಳನ್ನು ರಚಿಸಬೇಕು.
ಸ್ಪರ್ಧೆಯನ್ನು ಪ್ರೌಢ ಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ಮುಕ್ತ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಕವನಗಳು ಗರಿಷ್ಟ 5 ಚರಣಗಳಿಗೆ ಮೀರಬಾರದು. ಈ ಹಿಂದೆ ಎಲ್ಲೂ ಪ್ರಕಟವಾಗಿರಕೂಡದು. ಪ್ರೌಢಶಾಲಾ ವಿಭಾಗ / ಕಾಲೇಜು ವಿಭಾಗದ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಹಾಗೂ ಮೊಹರುಳ್ಳ ದೃಢೀಕರಣ ಪತ್ರವನ್ನು ಕವನದೊಂದಿಗೆ ಲಗತ್ತಿಸಿರಬೇಕು.
ಕವನಗಳನ್ನು ಅ.30ರೊಳಗೆ ರಾಜ್ಯೋತ್ಸವ ಕವನ ಸ್ಪರ್ಧಾ ವಿಭಾಗ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಕೊಡಿಯಾಲ್‌ಬೈಲ್, ಮಂಗಳೂರು-3 ಈ ವಿಳಾಸಕ್ಕೆ ಕಳುಹಿಸಿ ಕೊಡುವಂತೆ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
...............................