

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಶ್ರದ್ಧೆ, ನಂಬಿಕೆ ನಮಗೆ ನೈತಿಕ ಬಲ ತುಂಬುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದನ್ನು ಮೈಗೂಡಿಕೊಂಡರೆ ಫಲ ದೊರಕಲಿದೆ ಎಂದು ಹಿರಿಯ ಸಾಹಿತಿ ತಾಳ್ತಜೆ ವಸಂತಕುಮಾರ್ ಹೇಳಿದರು.
ಉಪ್ಪಿನಂಗಡಿಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕ ಮತ್ತು ವಸುಧಾ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ಕಲರವ-2 ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿದರು. ಉಪ್ಪಿನಂಗಡಿಯ ಡಾ.ಗೋವಿಂದಪ್ರಸಾದ್ ಕಜೆ ಅಗಲಿದ ಚೇತನಗಳಾದ ಯಕ್ಷಕನ್ಯೆ ಪಾತಾಳ ವೆಂಕಟರಮಣ ಭಟ್, ವೈದ್ಯ ಕೆ.ಶೀನಪ್ಪ ಶೆಟ್ಟಿ, ಡಾ.ಮುದ್ರಜೆ ರಾಮಚಂದ್ರ ಭಟ್ ಅವರಿಗೆ ನುಡಿನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕ ಅಧ್ಯಕ್ಷ ಕರುಣಾಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಕಾರ‌್ಯಕ್ರಮದಲ್ಲಿ ಭಾಷಣ, ಸ್ವರಚಿತ ಕವನ ವಾಚನ, ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‌್ಯಕ್ರಮ ನಡೆಯಿತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ಎ.ಕೃಷ್ಣ ರಾವ್ ಅರ್ತಿಲ, ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪ್ರಮುಖರಾದ ಡಾ.ರಾಜಾರಾಮ್, ಡಾ.ಕೆ.ಜಿ.ಭಟ್, ಡಾ.ಸುಪ್ರೀತ್ ಲೋಬೋ, ಗೋಪಾಲ ಹೆಗ್ಡೆ, ಯು.ಜಿ.ರಾಧಾ, ಡಾ.ನಂದೀಶ್, ಡಾ.ಸಂತೋಷ್, ಪ್ರೊ.ತೇಜಸ್ವಿ, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಿದ್ಯಾಧರ ಜೈನ್, ಲೋಕೇಶ್ ಬೆತ್ತೋಡಿ, ಜಯಪ್ರಕಾಶ್ ಕಡಮಾಜೆ, ವಂದನಾ ಶರತ್, ಸುಧಾಕರ ಶೆಟ್ಟಿ, ಸುಂದರ ಗೌಡ, ಸುನೀಲ್, ಹರಿರಾಮಚಂದ್ರ, ಕಂಘ್ವೆ ವಿಶ್ವನಾಥ ಶೆಟ್ಟಿ, ಸುಬ್ರಹ್ಮಣ್ಯ ಭಟ್, ಅಂಬಪ್ರಸಾದ್ ಪಾತಾಳ, ಸುರೇಶ್ ಜಿ., ರಾಜಗೋಪಾಲ ಭಟ್, ನವೀನ್ ಬ್ರಾಗ್ಸ್, ಯು.ರಾಜೇಶ್ ಪೈ, ಹರಿಣಾಕ್ಷಿ ಉಪಸ್ಥಿತರಿದ್ದರು. ಘಟಕ ಕಾರ‌್ಯದರ್ಶಿ ಯು.ಎಲ್.ಉದಯಕುಮಾರ್ ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ಯುನಿಕ್ ವಂದಿಸಿದರು. ಶೀಲಾ ಹರೀಶ್, ಸುಂದರಿ ನಿರೂಪಿಸಿದರು.