

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಜಿಲ್ಲೆಯಾದ್ಯಂತ ಸೆ. 30 ಮತ್ತು ಅ. 1ರಂದು ಸಂಚರಿಸಲಿದೆ ಎಂದು ಜಿಲ್ಲಾ-ಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೆ.30 ರಂದು ಬೆಳಗ್ಗೆ 9ಗಂಟೆಗೆ ಅಣ್ಣಿಗೇರಿ ತಾಲೂಕಿನಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ಸ್ವಾಗತಿಸಲಾಗುವುದು. ನಂತರ ಭದ್ರಾಪುರ, ನಲವಡಿ, ಶಿರಗುಪ್ಪಿ, ಯರಗುಪ್ಪಿ, ಬೆನಕನಹಳ್ಳಿ ಗ್ರಾಮಗಳಲ್ಲಿ ಸಂಚರಿಸಲಿದೆ. ಮಧ್ಯಾಹ್ನ 12.30ಕ್ಕೆ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸಂಜೆ 5 ಗಂಟೆಗೆ ಕಲಘಟಗಿ ತಾಲೂಕಿಗೆ ತೆರಳಲಿದೆ.
ಅ. 1ರಂದು ಬೆಳಗ್ಗೆ 10.30ಕ್ಕೆ ಕಲಘಟಗಿ ಮಾರ್ಗವಾಗಿ ಮಿಶ್ರಿಕೋಟಿ, ಹುಬ್ಬಳ್ಳಿ ಸಿದ್ಧಾರೂಢ ಮಠ, ಕಿತ್ತೂರಾಣಿ ಚನ್ನಮ್ಮ ಸರ್ಕಲ್, ಬಿ.ಆರ್.ಟಿ.ಎಸ್ ಮಾರ್ಗವಾಗಿ ಮಧ್ಯಾಹ್ನ 3ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಲಿದೆ. ನಂತರ ಶಿವಳ್ಳಿ, ಹೆಬಸೂರ ಮಾರ್ಗವಾಗಿ ನವಲಗುಂದ ತಾಲೂಕಿನಲ್ಲಿ ಸಂಚರಿಸಲಿದೆ.