ಕನ್ನಡ ಜ್ಯೋತಿ ರಥಯಾತ್ರೆ ಕಲ್ಯಾಣದಲ್ಲಿ ಭವ್ಯ ಸ್ವಾಗತ

12BK4
೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಶನಿವಾರ ಬಸವಕಲ್ಯಾಣದಲ್ಲಿ ಸ್ವಾಗತಿಸಲಾಯಿತು. ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಅಭಿನವ ಶ್ರೀಗಳು, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಪೂಜ್ಯ ಡಾ.ಗಂಗಾAಬಿಕಾ ಅಕ್ಕ, ಶಾಸಕ ಶರಣು ಸಲಗರ, ಎಂಎಲ್ಸಿ ಎಂ.ಜಿ.ಮುಳೆ, ಮಾಲಾ ಬಿ.ನಾರಾಯಣರಾವ, ತಹಸೀಲ್ದಾರ್ ದತ್ತಾತ್ರೇಯ ಗಾದಾ, ರಮೇಶ ಸುಲ್ಫಿ, ಅರ್ಜುನ ಕನಕ, ಸುರೇಶ ಚನ್ನಶೆಟ್ಟಿ, ಶಾಂತಲಿAಗ ಮಠಪತಿ, ಮುಜಾಹಿದ್ ಪಾಶಾ ಖುರೇಶಿ ಇತರರಿದ್ದರು.
Published on

ಬಸವಕಲ್ಯಾಣ: ಮಂಡ್ಯದಲ್ಲಿ ಡಿಸೆಂಬರ್ ೨೦ರಿಂದ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಶನಿವಾರ ಕಲ್ಯಾಣದಲ್ಲಿ ವೈಭವದ ಸ್ವಾಗತ ನೀಡಿ ಬರ ಮಾಡಿಕೊಳ್ಳಲಾಯಿತು.

ಸಸ್ತಾಪುರ ಬಂಗ್ಲಾದ ಮಹಾದ್ವಾರದಿಂದ ಬೈಕ್ ರ‍್ಯಾಲಿಯ ಮೂಲಕ ಬರಮಾಡಿಕೊಂಡ ನಂತರ ನಗರದ ತ್ರಿಪುರಾಂತನ ಮಡಿವಾಳ ವೃತ್ತದ ಬಳಿ ಪೂಜ್ಯರು ಹಾಗೂ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಸಮ್ಮುಖದಲ್ಲಿ ಸ್ವಾಗತಿಸಿ, ಶಾಸಕ ಶರಣು ಸಲಗರ ನಗರದಲ್ಲಿ ಯಾತ್ರೆಗೆ ಚಾಲನೆ ನೀಡಿದರು.

ಕನ್ನಡ ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕು. ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗವಿಸುವ ಮೂಲಕ ಕನ್ನಡ ಕಟ್ಟುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಲ್ಯಾಣದಲ್ಲಿ ಕನ್ನಡ ಭವನ ಮತ್ತು ಮಾತೆ ಭುವನೇಶ್ವರಿ ದೇಗುಲ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಎಂಎಲ್ಸಿ ಎಂ.ಜಿ.ಮುಳೆ ಮಾತನಾಡಿ, ಕನ್ನಡ ಬರಿ ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿಯಾಗಿದೆ. ಕನ್ನಡ ಕಟ್ಟುವ ಕಾರ್ಯಕ್ಕೆ ಎಲ್ಲರೂ ಜತೆಯಾಗಬೇಕು ಎಂದರು.

ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಬೇಲೂರಿನ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ ಮಾತನಾಡಿದರು.

ತಹಸೀಲ್ದಾರ್ ದತ್ತಾತ್ರೇಯ ಗಾದಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ತಾಪಂ ಇಒ ರಮೇಶ ಸುಲ್ಫಿ, ಅಧಿಕಾರಿಗಳಾದ ಸಿದ್ದವೀರಯ್ಯ ರುದನೂರ, ದಿಲೀಪಕುಮಾರ ಉತ್ತಮ, ಗೌತಮ ಸಿಂಧೆ, ಹಿರೇಗೌಡ, ಸಂಜುಕುಮಾರ ಕಾಂಗೆ, ಸಿಪಿಐ ಅಲಿಸಾಬ್, ಪ್ರಮುಖರಾದ ಅರ್ಜುನ ಕನಕ, ಮುಜಾಹಿದ್ ಪಾಶಾ ಖುರೇಶಿ, ಜ್ಞಾನೇಶ್ವರ ಮುಳೆ, ಸಿದ್ದು ಬಿರಾದಾರ, ಶಿವಶಂಕರ ಟೋಕ್ರೆ, ಪರಿಸರ ಅಭಿಯಂತರ ಮನೋಜಕುಮಾರ ಕಾಂಬಳೆ, ಸಂತೋಷ ಅಕ್ಕಣ್ಣ, ರಮೇಶ ಉಮ್ಮಾಪುರೆ, ಸುರೇಶ ಅಕ್ಕಣ್ಣ, ಸೂರ್ಯಕಾಂತ ಪಾಟೀಲ್, ಡಾ.ರುದ್ರಮಣಿ ಮಠಪತಿ, ರುದ್ರೇಶ್ವರ ಗೋರ್ಟಾ, ಸೂರ್ಯಕಾಂತ ಶೀಲವಂತ, ಮನೋಜ ಮಾಶೆಟ್ಟಿ, ಪ್ರತಾಪ ಸೂರ್ಯವಂಶಿ, ಅನಿಲ ಚಾಂದೆ, ಡಾ.ಶಿವಲೀಲಾ ಮಠಪತಿ, ನಾಗಮ್ಮ ಭುರೆ, ಗುರುನಾಥ ಮೂಲಗೆ, ರಮೇಶ ರಾಜೋಳೆ, ವಿ.ಎಸ್.ರಾಜೋಳೆ, ಡಾ.ಚಿತ್ರಶೇಖರ ಚಿರಳ್ಳಿ, ಕುಪ್ಪಣ್ಣ ಯಾಚೆ, ಅರವಿಂದ ಚಾಂದೆ, ಗೋವಿಂದರೆಡ್ಡಿ, ಬಸವರಾಜ ಮತ್ತು ನೀಲಾಂಬಿಕಾ ಆಶ್ರಮದ ಮಕ್ಕಳು, ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net