

ಉಡುಪಿ: ಕಬಡ್ಡಿ, ಲಗೋರಿ, ಸೊಪ್ಪಿನಾಟ ಮುಂತಾದ ಜಾನಪದ ಕ್ರೀಡೆಗಳಲ್ಲಿರುವ ಸೊಬಗು ಮತ್ತು ಆತ್ಮೀಯತೆ ಬೇರೆ ಕ್ರೀಡೆಗಳಲ್ಲಿ ಇಲ್ಲ. ಜಾನಪದೀಯ ಸೊಗಡು ಶಾಶ್ವತವಾಗಿದ್ದು, ಈ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳವಾರ ರಾಜಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ವತಿಯಿಂದ ನಡೆದ ಜಿಲ್ಲಾ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಗೊಲ್ಲರ ಮಧ್ಯೆಯೇ ಕೃಷ್ಣ ಅವತರಿಸಿದ್ದರಿಂದ ಜಾನಪದಕ್ಕೆ ಪ್ರೋತ್ಸಾಹ ನೀಡುವುದು ಅರ್ಥಪೂರ್ಣ ಕೆಲಸವಾಗಿದೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ. ಗಣನಾಥ ಎಕ್ಕಾರು ಮಾತನಾಡಿ, ತುಳು ಭಾಷೆ ಮತ್ತು ಸಂಸತಿ, ಜಾನಪದದ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಅದೇ ರೀತಿ ಕುಂದಗನ್ನಡ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು. ಸಂವೇದನೆಗಳನ್ನು ಕಳೆದುಕೊಳ್ಳುತ್ತಿರುವುದು ಇಂದಿನ ಎಲ್ಲಾ ಸಮಸ್ಯೆಗಳಿಗೆ ಕಾರಣ. ಸೂಕ್ಷ$್ಮ ಸಂವೇದನೆ ಉಳಿಸಕೊಳ್ಳಲು ಜಾನಪದ ಪ್ರಧಾನ ಆಕರ. ಎಲ್ಲರೂ ಸಮಾನರು ಎಂಬ ಜಾನಪದೀಯ ಚಿಂತನೆ ಸಂವಿಧಾನಕ್ಕೆ ಮೂಲ ಪ್ರೇರಣೆ. ಜಾನಪದದ ತತ್ವಗಳನ್ನು ಬದುಕಿಗೆ ಅನ್ವಯಿಸುವುದು ಬಹಳ ಮುಖ್ಯ ಎಂದರು.
ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ರುಘುಪತಿ ಭಟ್, ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ, ತುಳು ಪಾಡ್ದನ ಕಲಾವಿದ ಕೃಷ್ಣ ಪಾಣ, ಪಾಣರಾಟದ ಕಲಾವಿದ ನಾಗರಾಜ್ ಪಾಣ, ಜನಪದ ಕಲಾವಿದ ಶಂಕರ್ದಾಸ್, ಸಂಪ್ರದಾಯ ಹಾಡುಗಳ ಗಾಯಕಿ ಜಾಹ್ನವಿ ಹೆರ್ಳೆ, ಹೌಂದರಾಯನ ವಾಲ್ಗ ಕಲಾವಿದ ಸತೀಶ್ ಕಾಂಚನ್, ಯಕ್ಷಗಾನ ಕಲಾವಿದೆ ಜ್ಯೋತಿ ಮಾಧವ ಪ್ರಭು, ಪರಿಷತ್ತಿನ ತಾಲೂಕು ಅಧ್ಯಕ್ಷ ಮಾಯಾ ಕಾಮತ್, ಜಂಟಿ ಕಾರ್ಯದರ್ಶಿ ಮೊಹಮ್ಮದ್ ಫಾರುಕ್, ಪ್ರ. ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಖಜಾಂಚಿ ಚಂದ್ರ ಹಂಗಾರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಸಂಟನಾ ಕಾರ್ಯದರ್ಶಿ ರಾವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಪರಿಷತ್ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಪ್ರಸ್ತಾವನೆಗೈದರು. ಎನ್. ಆರ್. ದಾಮೋದರ ಶರ್ಮ ನಿರೂಪಿಸಿದರು.