ಕನ್ನಡ ಜೈಮಿನಿ ಭಾರತ ಉತ್ಕೃಷ್ಟ ಷಟ್ಪದಿ ಕಾವ್ಯ

25 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಂಡಿತರು, ಪಾಮರರೆಲ್ಲ ಅತ್ಯಂತ ಪ್ರೀತಿಯಿಂದ ಎದೆಗೊತ್ತಿಕೊಂಡ ಚಮತ್ಕಾರಿಕ ಶೈಲಿ, ಸೂಕ್ತ ಉಪಮೆಗಳು, ಅಲಂಕಾರ, ಭಾವರಸಗಳ ಸೂಕ್ತ ಬಳಕೆಯಿಂದ ನಾದಲೋಲ ಲಕ್ಷ್ಮೀ ಶನ "ಕನ್ನಡ ಜೈಮಿನಿ ಭಾರತ'ವು ಕನ್ನಡ ಕಾವ್ಯ ಪರಂಪರೆಯ ಒಂದು ಅತ್ಯುತ್ಕೃಷ್ಟ ಷಟ್ಪದಿ ಕಾವ್ಯವಾಗಿ ಅರಳಿ ನಿಂತಿದೆ ಎಂದು ಕಿಟಲ್​ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ರಮೇಶ ಗೋಡಬೋಲೆ ಅಭಿಪ್ರಾಯಪಟ್ಟರು.

ನಗರದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ನಾದಲೋಲ "ಕನ್ನಡ ಜೈಮಿನಿ ಭಾರತ' ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವತಃ ಕವಿಯೇ ಹೇಳಿದಂತೆ ಇದು ಕೇವಲ ಅಶ್ವಮೇಧದ ಕಥೆಯಾಗಿರದೆ, ಹಲವು ಸುಂದರ ಕಥೆಗಳ ಕಥಾ ಗುಚ್ಛವಾಗಿದೆ. ನೀಲಧ್ವಜ, ಜ್ವಾಲೆಯರ ಕಥೆ ಮತ್ತು ಹಂಸಧ್ವಜ, ಸುಧನ್ವ, ಪ್ರಭಾವತಿಯರ ಪ್ರಸಂಗಗಳನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಶಶಿಧರ ತೋಡಕರ ಮಾನತಾಡಿದರು. ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ರಾಜೀವ ಪಾಟೀಲ ಕುಲಕರ್ಣಿ, ಪ್ರೊ. ದುಷ್ಯಂತ ನಾಡಗೌಡ, ಡಾ. ಅರವಿಂದ ಯಾಳಗಿ, ಪ್ರೊ. ಮಧುಕರ ಯಕ್ಕುಂಡಿ, ಮಹಾಬಳೇಶ್ವರ ಸಿಂದಗಿ, ಡಾ. ರುದ್ರಣ್ಣ ಚಿಲುಮಿ, ಡಾ. ಅರುಣ ಅಂಗಡಿ, ಎಸ್​.ಬಿ. ದ್ವಾರಪಾಲಕ, ಆರ್​.ಎಂ. ಹೊಸಮನಿ, ಡಾ. ಮಂದಾಕಿನಿ ಪುರೋಹಿತ, ಪೂಜಾ ಕುಲಕರ್ಣಿ, ಸೀಮಾ ಪರಾಂಜಪೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net