ಪ್ರಾಚೀನ ಐದು ಭಾಷೆಗಳಲ್ಲಿ ಕನ್ನಡವೂ ಒಂದು: ಡಾ.ರುಮಾಲೆ

10 HPT 3
ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಸುವರ್ಣ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಹಾಗೂ ಭಾವಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಅಶ್ವಿನಿ ಶಾಲೆಯ ವಿದ್ಯಾರ್ಥಿಗಳು ಸಮೂಹ ನೃತ್ಯ ಪ್ರದರ್ಶಿಸಿದರು.
Published on

ಹೊಸಪೇಟೆ: ಪೂರ್ವ ಶಿಲಾಯುಗದಷ್ಟು ಹಳೆಯ ಕುರುಹುಗಳನ್ನು ಹೊಂದಿರುವ ಕನ್ನಡ ಪ್ರಪಂಚದ ಪ್ರಮುಖ ಐದು ಭಾಷೆಗಳಲ್ಲಿ ಒಂದು ಎಂದು ವಿಜಯನಗರ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ತಿಳಿಸಿದರು.

ಇಲ್ಲಿನ ವಿಜಯನಗರ ಮಹಾವಿದ್ಯಾಲಯದ ಸುವರ್ಣ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಹಾಗೂ ಭಾವಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ `ಕರ್ನಾಟಕ ನಾಮಕರಣ ಹಿನ್ನೆಲೆ' ಕುರಿತು ಉಪನ್ಯಾಸ ನೀಡಿದ ಅವರು, ಕನ್ನಡ ಭಾಷಿಗರ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಪಸರಿಸಿತ್ತು. ಈಗ ಗೋದಾವರಿ ಇರಲಿ, ಕಾವೇರಿ ನೀರು ಸಹ ಕರ್ನಾಟಕಕ್ಕೆ ದೊರಕದ ಪರಿಸ್ಥಿತಿ ಇದೆ. ಕನ್ನಡಿಗರೇ ಕನ್ನಡವನ್ನು ಪರಿಪೂರ್ಣವಾಗಿ ಬಳಸುತ್ತಿಲ್ಲ. ಹೀಗಾಗಿ ಗೋದಾವರಿಯಿಂದ ಕೃಷ್ಣಾ ನದಿ ತೀರಕ್ಕೆ ಕನ್ನಡ ಬಂದು ನಿಂತಿದೆ. ಮುಂದೊAದು ದಿನ ಕೃಷ್ಣಾ ನದಿದಾಟಿ ತುಂಗಭದ್ರೆಗೆ ಬಂದು ನಿಂತರೂ ಆಶ್ಚರ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ದಿನ ಕಳೆದಂತೆ ಕನ್ನಡದ ಅಸ್ಮಿತೆ ಸೊರಗಿದರೆ ಭವಿಷ್ಯದಲ್ಲಿ ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಾರೆ. ಈ ನಿಟ್ಟಿನಲ್ಲಿ ಎಚ್.ಎಂ. ಜಂಬುನಾಥ ಮತ್ತು ಜಿ.ಯರ್ರಿಸ್ವಾಮಿ ಬರೆದ ಕವನಗಳು ಜನರಲ್ಲಿ ನಾಡು-ನುಡಿಯ ಅಭಿಮಾನವನ್ನು ಗಟ್ಟಿಗೊಳಿಸುವ ಜತೆಗೆ ಹೊರನಾಡಿಗೂ ತಲುಪುವಂತಿವೆ ಎಂದು ಮೆಚ್ಚುಗೆ ಸೂಚಿಸಿದರು.

ವಿಜಯನಗರ ಕಾಲೇಜಿನ ಅಧ್ಯಕ್ಷ ಅಸುಂಡಿ ಬಿ. ನಾಗರಾಜಗೌಡ ಮಾತನಾಡಿ, ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕವಿವಾಣಿಯಂತೆ ಕನ್ನಡಿಗರು ಪರಭಾಷೆಯ ವ್ಯಾಮೋಹಕ್ಕೆ ಒಳಗಾಗದೇ, ಕನ್ನಡದ ಹಿರಿಮೆ- ಗರಿಮೆಯನ್ನು ಹೆಚ್ಚಿಸಬೇಕು. ಅನ್ಯ ಭಾಷೆಗಳನ್ನು ಕಲಿತರೂ ಮಾತೃ ಭಾಷೆ ಮರೆಯಬಾರದು ಎಂದು ಸಲಹೆ ನಿಡಿದರು.

ವಿಜಯನಗರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಧುರಚನ್ನ ಶಾಸ್ತಿç ಹಿರೇಮಠ, ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಟಿ.ಸುಭಾಷ್ ಅಧ್ಯಕ್ಷತೆ ವಹಿಸಿದ್ದರು.
ಅಶ್ವಿನಿ ಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ.ವಿಜಯಕುಮಾರ್, ಹೊಸಪೇಟೆಕನ್ನಡಪರ ಸಂಘಟನೆಗಳ ಸಂಚಾಲಕ ಪಿ.ವಿ.ವೆಂಕಟೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net