ಕನ್ನಡ ಸಮೃದ್ಧ ಭಾಷೆ

28 ckm 3
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದ ಆವರಣದಲ್ಲಿ ಕಸಾಪ ತಾಲೂಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಷ್ಟçಧ್ಜಜ, ನಾಡ ಧ್ವಜ ಹಾಗೂ ಕಸಾಪ ಧ್ವಜಾರೋಹಣ ನಡೆಯಿತು. ಬಿಸಿಲೇಹಳ್ಳಿ ಸೋಮಶೇಖರ್, ಡಾ.ಸುಮಂತ್, ಎಂ.ಎಲ್.ಮೂರ್ತಿ, ವೀಣಾ ಮಲ್ಲಿಕಾರ್ಜುನ್, ಬಿ.ಆರ್.ಕುಮಾರಪ್ಪ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕನ್ನಡ ಸಂಮೃದ್ಧ ಭಾಷೆ. ನಿರಂತರ ಬಳಕೆಯಿಂದ ಭಾಷೆಯ ಬೆಳವಣಿಗೆ ಸಾಧ್ಯ ಎಂದು ತಾಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿರುವ ೫ನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ಕಸಪಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಚನ ಶ್ರೇಷ್ಠ, ಕವಿಶ್ರೇಷ್ಠ, ದಾಸಶ್ರೇಷ್ಠ ಹೀಗೆ ಎಲ್ಲ ಕನ್ನಡ ಮನಸ್ಸುಗಳಿಂದ ಕನ್ನಡ ಭಾಷೆ ಸಂಮೃದ್ಧವಾಗಿದೆ. ಭಾಷೆಯ ಬೆಳವಣಿಗೆಗೆ ಪೂರಕವಾಗಿ ವಿವಿಧ ಹಂತಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದುಕೊಂಡು ಬಂದಿವೆ. ತಾಲೂಕಿನಲ್ಲಿ ಈಗಾಗಲೇ ೪ಸಮ್ಮೇಳನಗಳೂ ಯಶಸ್ವಿಯಾಗಿ ನಡೆದಿವೆ. ೧೩ವರ್ಷಗಳ ಬಳಿಕ ೫ನೆಯ ಸಮ್ಮೇಳನ ನಡೆಯುತ್ತಿದೆ ಎಂದರು.
ಸುAದರ ಮಲೆನಾಡಿನ ಜೊತೆಗೆ ಅರೆಮಲೆನಾಡು-ಬಯಲು ಪ್ರದೇಶಗಳನ್ನೂ ಒಳಗೊಂಡ ವೈವಿಧ್ಯಮಯ ತಾಲೂಕು ಚಿಕ್ಕಮಗಳೂರು ಅಗಿದೆ. ವಿವಿಧ ಭಾಷಿಗರು ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಕನ್ನಡ ಪ್ರಧಾನಭಾಷೆಯಾಗಿ ಮೆರೆಯುತ್ತಿದ್ದು ಸಾಹಿತ್ಯಲೋಕಕ್ಕೆ ತಾಲೂಕಿನ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.
ರಾಷ್ಟçಧ್ವಜರೋಹಣ ನೆರವೇರಿಸಿದ ಚಿಕ್ಕಮಗಳೂರು ತಹಸೀಲ್ದಾರ್ ಡಾ.ಬಿ.ಇ.ಸುಮಂತ್ ಮಾತನಾಡಿ, ನಾಡು-ನುಡಿಯ ಜಾಗೃತಿ ಕೆಲಸ ನಿರಂತರವಾಗಿ ನಡೆದಿದೆ. ಕನ್ನಡದ ರಥ ಸಂಚರಿಸಿದ ಬೆನ್ನಲ್ಲೆ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ನವೆಂಬರ್‌ನಲ್ಲೂ ಕನ್ನಡದ ನಿನಾದ ಮೊಳಗುತ್ತಿದ್ದು ಒಟ್ಟಾರೆ ಕನ್ನಡ ಜಾಗೃತಿಯ ವಾತಾವರಣ ಸಂತಸ ತಂದಿದೆ ಎಂದರು.
ನಾಡ ಧ್ವಜಾರೋಹಣ ನೆರವೇರಿಸಿದ ಸ್ವಾಗತಿ ಸಮಿತಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ನಾಡು-ನುಡಿ, ನೆಲ-ಜಲ, ಸಾಹಿತ್ಯ-ಸಂಗೀತ-ಸAಸ್ಕೃತಿ-ಕಲೆ ಎಲ್ಲವೂ ಮಾನವನನ್ನು ಸುಸಂಸ್ಕೃತಿಯನ್ನಾಗಿಸುತ್ತವೆ. ಕನ್ನಡ ಸಾಹಿತ್ಯದ ವಿವಿಧ ಆಯಾಮಗಳನ್ನು ಚರ್ಚಿಸಿ ಮನನ ಮಾಡಿಕೊಳ್ಳಲು ಸಮ್ಮೇಳನಗಳು ಸಹಕಾರಿ. ಆ ನಿಟ್ಟಿನಲ್ಲಿ ತಾಲೂಕು ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಿವೃತ್ತ ದೈಹಿಕ ಶಿಕ್ಷಕ ಬಿ.ಆರ್.ಕುಮಾರಪ್ಪ, ಜಿಲ್ಲಾ ಕಸಾಪ ಪ್ರಧಾನಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮತ್ತು ಜಿ.ವಿ.ಪವನ್, ತಾಲೂಕು ಕಾರ್ಯದರ್ಶಿ ವೀರೇಶ್‌ಕೌಲಗಿ, ಖಜಾಂಚಿ ಈಶ್ವರಪ್ಪ, ಕಲಾವಿದ ಹುಲಿಕೆರೆ ಪುಲಿಕೇಶಿ, ಕಸಾಬ ಹೋಬಳಿ ಘಟಕದ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ, ಆಲ್ದೂರಿನ ನೂರ್‌ಅಹಮ್ಮದ್, ಖಾಂಡ್ಯದ ರಾಜಪ್ಪಗೌಡ, ಆವುತಿಯ ಸೋಮೇಶ್, ತಾಲೂಕು ಸಂಚಾಲಕಿ ಅನಿತಾ, ಸಚಿನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net