ಹೃದಯಕ್ಕೆ ಹತ್ತಿರವಾಗುವ ಭಾಷೆ ಕನ್ನಡ

09bhr 1
Published on

ಬಾಳೆಹೊನ್ನೂರು: ಅತ್ಯಂತ ಶ್ರೀಮಂತ ಹಾಗೂ ಪ್ರೀತಿಯ ಭಾಷೆಯಾಗಿರುವ ಕನ್ನಡ ಹೃದಯಕ್ಕೆ ಹತ್ತಿರುವಾಗುವ ಭಾಷೆಯಾಗಿದೆ ಎಂದು ಎನ್.ಆರ್.ಪುರ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಹೇಳಿದರು.

ಪಟ್ಟಣದ ಕಡ್ಲೇಮಕ್ಕಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಆಯೋಜಿಸಿದ್ದ ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಯು ವ್ಯಾಕರಣ, ಛಂದಸ್ಸು, ಗಾದೆಗಳು, ಒಗಟುಗಳು, ವಚನ ಮುಂತಾದವನ್ನು ಹೊಂದಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಪ್ರತಿಯೊಬ್ಬ ಕನ್ನಡಿಗರು ಮಾತೃಭಾಷೆ ಕನ್ನಡವನ್ನು ಹೆಚ್ಚಾಗಿ ಬಳಸಿ ಇತರ ಭಾಷೆಗಳನ್ನು ಗೌರವಿಸಬೇಕಿದೆ ಎಂದರು.

ಪ್ರತಿ ಮನೆ, ಹಳ್ಳಿಗಳಿಗೂ ಕನ್ನಡ ಸಾಹಿತ್ಯವನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ತಾಲೂಕು ಕಸಾಪ ಕನ್ನಡವೇ ನಮ್ಮಮ್ಮ ಅನುದಿನವೂ ಸಾಹಿತ್ಯ ಸಂಭ್ರಮ ಎಂಬ ಶೀರ್ಷಿಕೆಯಡಿ ನವೆಂಬರ್ ಮಾಸದಲ್ಲಿ ತಾಲೂಕಿನಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಬೇಕು ಎಂಬುದೇ ಸಾಹಿತ್ಯ ಪರಿಷತ್‌ನ ಉದ್ದೇಶವಾಗಿದೆ ಎಂದು ಹೇಳಿದರು.

ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ಹೋಬಳಿ ಕಸಾಪ ನಿಯೋಜಿತ ಅಧ್ಯಕ್ಷ ಕಾರ್ತಿಕ್ ಕಾರ್‌ಗದ್ದೆ, ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್, ಕಸಾಪ ಸದಸ್ಯೆ ಲತಾ, ಉಪನ್ಯಾಸಕರಾದ ಮಮತಾ ಸೋಮೇಶ್, ಮಾಲತಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net