ಕನ್ನಡ ಸುಂದರ ಸರಳ ಭಾಷೆ

h18-kannada sahitya
Published on

ಹುಬ್ಬಳ್ಳಿ: ಕನ್ನಡ ಸುಂದರ ಮತ್ತು ಸರಳ ಭಾಷೆ. ನಮ್ಮ ಮಾತೃಭಾಷೆ ಜತೆಗೆ ಇತರ ಭಾಷೆಗೂ ಗೌರವ ಕೊಡಬೇಕು ಎಂದು ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ನಗರ ತಾಲೂಕು ಘಟಕ, ಲಿಂ. ಮಾತೋಶ್ರೀ ಅಂದಾನೆಮ್ಮ ಯಕ್ಕುಂಡಿಮಠ ಹಾಗೂ ದಿ. ಮಹಾಂತಪ್ಪ ಕೊಟ್ಟೆಪ್ಪ ಸಜ್ಜನರ ದತ್ತಿ ಕಾರ್ಯಕ್ರಮದ ಅಂಗವಾಗಿ ನಗರದ ಗೋಕುಲ ರಸ್ತೆಯ ಮಂಜುನಾಥ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ಭಾವ ಗೀತೆಗಳ ಸವಿ, ಉಪನ್ಯಾಸ ಹಾಗೂ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾವಗೀತೆಗಳು ಮತ್ತು ನಾಡಗೀತೆಗಳು ಕನ್ನಡ, ನಾಡು, ನುಡಿ, ಸಂಸ್ಕೃತಿ, ಜಲ, ಪ್ರಾಕೃತಿಕ ಸೌಂದರ್ಯ ಮುಂತಾದ ವಿಷಯಗಳನ್ನು ತಿಳಿಸುತ್ತವೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಆರ್.ಎಂ. ಗೋಗೇರಿ, ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಆರ್. ಆಶಿ, ಸಂಧ್ಯಾ ದೀಕ್ಷಿತ ಮಾತನಾಡಿದರು.

ವಿದ್ಯಾರ್ಥಿಗಳು ನೃತ್ಯದ ಮೂಲಕ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ಹೋರಾಟಗಾರರು ಮತ್ತು ನಟರ ಛದ್ಮವೇಷ ಧರಿಸಿ ಮನೋರಂಜನೆ ನೀಡಿದರು.

ಪ್ರಧಾನಗುರು ಎಚ್.ಬಿ. ಕೊರವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ರೂಪಾ ಹೆಬ್ಬಳ್ಳಿ ವಂದಿಸಿದರು. ಕಸಾಪ ಹುಬ್ಬಳ್ಳಿ ನಗರ ಘಟಕದ ಅಧ್ಯಕ್ಷ ವಿರೂಪಾಕ್ಷ ಕಟ್ಟಿಮನಿ, ಶಿಕ್ಷಕ ಸುಭಾಷ ಚವ್ಹಾಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net