ಕನ್ನಡಕ್ಕಿದೆ ಶ್ರೀಮಂತ ಸಾಹಿತ್ಯ

15KITTUIR1
Published on

ಚನ್ನಮ್ಮನ ಕಿತ್ತೂರು: ಜಾಗತಿಕ ಭಾಷೆಗಳಲ್ಲಿಯೇ ಕನ್ನಡ ಅತ್ಯಂತ ಶ್ರೀಮಂತ ಸಂಸತಿ, ಸಾಹಿತ್ಯ ಹೊಂದಿದೆ. ಅದು ಎಲ್ಲರ ಮನೆ&ಮನಕ್ಕೆ ತಲುಪಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯ ಎಲ್​.ಎನ್​. ಮುಕುಂದರಾಜ ಹೇಳಿದರು.

ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಭಾನುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಬೆಳಗಾವಿ ಜಿಲ್ಲಾ ಟಕ ಉದ್ಘಾಟಿಸಿ ಕನ್ನಡ ಕಾವ್ಯದ ಬಹುತ್ವದ ನೆಲೆಗಳು ವಿಷಯವಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಕಲ್ಮಠದ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಕನ್ನಡ ಸಾಹಿತ್ಯದ ವಿವಿಧ ಆಯಾಮಗಳನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಶಿಕರು ಮತ್ತು ವಿದ್ಯಾರ್ಥಿಗಳಿಗಾಗಿ ಅಕಾಡೆಮಿ ಮತ್ತು ಕಲ್ಮಠದಿಂದ ಶ್ರೀದಲ್ಲೇ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ತಿಳಿಸಿದರು. ಅಧ್ಯತೆ ವಹಿಸಿದ್ದ ವೇದಿಕೆ ಜಿಲ್ಲಾ ಸಂಚಾಲಕ ಎಲ್​.ಎಸ್​. ಶಾಸ್ತ್ರೀ ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕಾಗಿ ಪುಸ್ತಕ ಓದುವ ಹವ್ಯಾಸ ಮೆಗೂಡಿಸಿಕೊಳ್ಳಬೇಕು. ಆಗ ಲೇಖಕರ ಶ್ರಮ ಸಾರ್ಥಕವಾಗುತ್ತದೆ ಎಂದರು.

ಸಾಹಿತ್ಯ ಅಕಾಡೆಮಿ ಸಂಚಾಲಕಿ ಡಾ.ಮೆತ್ರೇಯಿಣಿ ಗದಿಗೆಪ್ಪಗೌಡರ ಪ್ರಾಸ್ತಾವಿಕ ಮಾತನಾಡಿ, ಚಕೋರ ವೇದಿಕೆಯಿಂದ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ಸಾಹಿತ್ಯಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಡಾ.ಪ್ರಜ್ಞಾ ಮತ್ತಿಹಳ್ಳಿ, ಕಸಾಪ ತಾಲೂಕು ಅಧ್ಯ ಡಾ.ಎಸ್​.ಬಿ.ದಳವಾಯಿ, ಉಪ ಪ್ರಾಚಾರ್ಯ ಮಹೇಶ ಚೆನ್ನಂಗಿ, ಸಂಚಾಲಕ ನಾಗೇಶ ನಾಯಕ, ಈಶ್ವರ ಗಡಿಬಿಡಿ, ಕಸಾಪ ತಾಲೂಕು ಮಾಜಿ ಅಧ್ಯ ಬಸವರಾಜ ಕುಪ್ಪಸಗೌಡ್ರ, ಪ್ರಾಧ್ಯಾಪಕ ಸಂಜೀವ ಲದ್ದಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net