

ಹುಕ್ಕೇರಿ: ಜಗತ್ತಿನ ಪುರಾತನ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆ ಉಳಿಸಿ-ಬೆಳೆಸಬೇಕಾದ ಪರಿಸ್ಥಿತಿ ಎದುರಾಗಿರುವುದು ಖೇದಕರ ಎಂದು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಉತ್ಸವ ಅರ್ಥಪೂರ್ಣವಾಗಿ ಆಚರಿಸುವ ಜತೆಗೆ ಅದರ ಹಿರಿಮೆ ಹೆಚ್ಚಿಸುವಲ್ಲಿ ಎಲ್ಲರೂ ಶ್ರಮಿಸೋಣ ಎಂದು ಸಲಹೆ ನೀಡಿದರು.
ಶಾಸಕ ನಿಖಿಲ ಕತ್ತಿ ಮಾತನಾಡಿ, ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ನಾಡು, ನುಡಿ, ನೆಲ ಹಾಗೂ ಜಲ ರಕ್ಷಣೆಗೆ ಮುಂದಾಗಬೇಕು. ಸರ್ವ ಧರ್ಮ ಸಮನ್ವಯ ಜತೆಗೆ ಕನ್ನಡ ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿದರು. ಕರವೇ ತಾಲೂಕಾಧ್ಯಕ್ಷ ಪ್ರಮೋದ ಹೊಸಮನಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಉದ್ಯಮಿ ಸುರೇಶ ತಳವಾರ ಮಾತನಾಡಿದರು. ಕವಿಯಿತ್ರಿ ಜ್ಯೋತಿ ಬೆಳವಿ ಕವನ ಓದಿದರು.\
ಅವಜೀಕರ ಮಠದ ಅಭಿನವ ಮಂಜುನಾಥ ಸ್ವಾಮೀಜಿ, ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಪಿಎಸ್‌ಐ ಮಹಾಂತೇಶ ಬಸ್ಸಾಪುರ, ಅಶೋಕ ಪಟ್ಟಣಶೆಟ್ಟಿ, ಉದಯ ಹುಕ್ಕೇರಿ, ಸುನೀಲ ಬೈರನ್ನವರ, ಪ್ರಜ್ವಲ ನಿಲಜಗಿ, ರೇಖಾ ಚಿಕ್ಕೋಡಿ, ರಮೇಶ ಹುಂಜಿ, ಪ್ರದೀಪ ರಿಜಕನವರ, ಪ್ರಮೋದ ಕೂಗೆ, ರಾಬಿನ್ ಕೌಜಲಗಿ, ಶಾಂತಿನಾಥ ಮಗದುಮ್ಮ, ಸುನೀಲ ಕರೋಶಿ, ಮಹಾಂತೇಶ ಬೇವಿನಕಟ್ಟಿ, ವಿಲ್ಸನ್ ಕೌಜಲಗಿ, ಜ್ಞಾನೇಶ ಗೌಡರ, ಸೌರಭ ತಳವಾರ, ಚೇತನ ಮಗದುಮ್ಮ, ಸುನೀಲ ಮಾಳಗೆ, ಅರುಣ ಬೆಳವಿ, ಜಾನ್ಸನ್ ಕೌಜಲಗಿ, ಆಕಾಶ ಬಾಳವ್ವಗೋಳ, ವಿರೇಶ ಮಗದುಮ್ಮ, ಅಕ್ಷಯ ವೀರಮುಖ, ಅಶೋಕ ಮರಡಿ ಇತರರಿದ್ದರು.