ಕನ್ನಡ ಬಳಕೆಗೆ ಆದ್ಯತೆ ನೀಡಲಿ

7yaragatti1
Published on

ಯರಗಟ್ಟಿ: ನಾಡಿನಲ್ಲಿ ಪ್ರತಿಯೊಬ್ಬರೂ ತಮ್ಮ ವೃತ್ತಿ ಬದುಕಿನಲ್ಲಿಯೂ ಕಡ್ಡಾಯವಾಗಿ ಕನ್ನಡ ಬಳಕೆಗೆ ಆದ್ಯತೆ ನೀಡಿದಾಗ ಮಾತ್ರ ಕನ್ನಡ ಕಂಪು ಹೆಚ್ಚಿಸಲು ಸಾಧ್ಯ ಎಂದು ಸಂಸದ ಜಗದೀಶ ಶೆಟ್ಟರ್​ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಸಭಾ ಭವನದಲ್ಲಿ ಕಸಾಪ ತಾಲೂಕು ಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಹೆಸರು 50 ಉಸಿರು ಅನವರತ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಸವದತ್ತಿ ಕಸಾಪ ತಾಲೂಕಾಧ್ಯಕ್ಷ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ಸರ್ಕಾರ ರಾಜ್ಯಾದ್ಯಂತ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ತೆರೆಯುವ ಮೂಲಕ ಕನ್ನಡ ಶಾಲೆ ಮುಚ್ಚುವತ್ತ ಹೆಜ್ಜೆಯಿಡುತ್ತಿರುವುದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ಹೆಸರು&50 ಉಸಿರು ಅನವರತ ಕೃತಿ ಲೇಖಕ ಡಾ.ರಾಜಶೇಖರ ಬಿರಾದಾರ ಮಾತನಾಡಿ, ಕರ್ನಾಟಕ ನಾಮಕರಣಕ್ಕೆ 50 ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಕಸಾಪ ರಾಜ್ಯ ಟಕ ನೀಡಿದ ಜವಾಬ್ದಾರಿಯಂತೆ ಜಿಲ್ಲಾ ಹಾಗೂ ತಾಲೂಕು ಕಸಾಪ ಟಕಗಳ ಆಶ್ರಯದಲ್ಲಿ ವರ್ಷವಿಡಿ ವಿವಿಧ ಗ್ರಾಮಗಳಲ್ಲಿ ಸರಣಿ ಉಪನ್ಯಾಸ ಹಮ್ಮಿಕೊಂಡು ಸಾಹಿತಿಗಳ ಸಹಕಾರದಿಂದ ಕೃತಿ ರಚಿಸಲಾಗಿದೆ ಎಂದರು.

ಹೆಸರು&50 ಉಸಿರು ಅನವರತ ಕೃತಿ ಬಿಡುಗಡೆಗೊಳಿಸಲಾಯಿತು. ಪುಸ್ತಕ ದಾನಿ ಸುಜಿತಕುಮಾರ ದೇಸಾಯಿ, ತಹಸೀಲ್ದಾರ್​ರಾದ ಮಹಾಂತೇಶ ಮಠದ, ಮಾಧವಾನಂದ ಗುಂಡಪ್ಪಗೋಳ, ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ, ಕಾನಿಪ ಸಂದ ತಾಲೂಕಾಧ್ಯ ಶಿವಾನಂದ ಬಳಿಗಾರ ಅವರನ್ನು ಸನ್ಮಾನಿಸಲಾಯಿತು. ಕಸಾಪ ತಾಲೂಕಾಧ್ಯ ತಮ್ಮಣ್ಣ ಕಾಮನ್ನವರ ಅಧ್ಯತೆ ವಹಿಸಿದ್ದರು, ಡಾ.ಕೆ.ವಿ.ಪಾಟೀಲ, ಮಹಾಂತೇಶ ಜಕಾತಿ, ರಾಜೇಂದ್ರ ವಾಲಿ, ಡಾ.ವಿಶ್ವನಾಥ ತಾಂವಶಿ, ದೇವೇಂದ್ರ ಕಮ್ಮಾರ, ಮೋಹನ ಹಾದಿಮನಿ, ಅಶೋಕ ಅಂಗಡಿ, ಮಹಾಂತೇಶ ಮುದ್ದನ್ನವರ, ಡಾ.ಕುಮಾರ ದಾಸರ, ವಿಠ್ಠಲ ದಳವಾಯಿ, ಡಾ.ಎಂ.ಎಸ್​.ಇಂಚಲ, ಶಿವಾನಂದ ಪಟ್ಟಣಶೆಟ್ಟಿ, ಶಿವಾನಂದ ಕರಿಗೊಣ್ಣವರ, ಭಾಸ್ಕರ ಹಿರೇಮೇತ್ರಿ, ಎಸ್​.ಎಸ್​.ಕುರಬಗಟ್ಟಿಮಠ, ಎ.ಎ.ಮಕ್ತುಂನವರ, ಮನೋಹರ ಚೀಲದ, ಶಿವಾನಂದ ಮಿಕಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net