

ಹುಬ್ಬಳ್ಳಿ: ಮೈಸೂರ್ ಸಂಸ್ಥಾನ ಭಾರತ ಒಕ್ಕೂಟಕ್ಕೆ ವಿಲೀನಗೊಂಡ ದಿನದ ಅಂಗವಾಗಿ ಶನಿವಾರ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಆಟೋಗಳಿಗೆ ಕನ್ನಡ ಧ್ವಜ ವಿತರಿಸಲಾಯಿತು.
ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ಹಾಗೂ ಯುವ ಕರ್ನಾಟಕ ವೇದಿಕೆ ವತಿಯಿಂದ ನೂರಾರು ರಿಕ್ಷಾಗಳಿಗೆ ಕನ್ನಡ ಬಾವುಟ ವಿತರಿಸಲಾಯಿತು. ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಮಂಜುನಾಥ ಯರಗಂಬಳಿಮಠ, ಮುರಳಿ ಇಂಗಳಹಳ್ಳಿ, ಮಹಾವೀರ ಬಿಲಾನ, ರಾಜೇಶ್ ಬಿಜ್ವಾಡ್, ಗುರು ಬೆಟಗೇರಿ, ಪವನ್, ಧಾವಲಸಾಬ್ ಕುರಟ್ಟಿ, ಶಂಕರ್ ಆಚಾರ್ಯ, ನಿಂಗಪ್ಪ ಗೋರಕನವರ್ ಇತರರು ಪಾಲ್ಗೊಂಡಿದ್ದರು.