ಕನ್ನಡ ಮೊದಲ ಅಕ್ಷರಸ್ಥ ನೆಲ: ಪ್ರೊ.ಬಿ.ವಿ. ಸಾಂಬಶಿವಯ್ಯ

DSC03535
Published on

ಮೈಸೂರು: ಬಿ.ಎನ್. ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ನೆಲವು ಭಾಷೆಯ ವಿಚಾರದಲ್ಲಿ ಭಾರತದ ಇತರ ಭಾಷೆಗಳಿಗಿಂತ ಘನ ಇತಿಹಾಸವನ್ನು ಹೊಂದಿದೆ. ಕನ್ನಡ ಮೊದಲ ಅಕ್ಷರಸ್ಥ ನೆಲವೆಂದು ಗುರುತಿಸಲ್ಪಟ್ಟಿದೆ. ಆ ಕಾರಣದಿಂದಲೇ ಅಶೋಕನಿಗೆ ಸಂಬಂಧಿಸಿದ ಹೆಚ್ಚು ಶಾಸನಗಳು ನಮಗೆ ಇಲ್ಲಿ ದೊರೆಯುತ್ತವೆ ಎಂದರು.


ಹೇಮಗಂಗೋತ್ರಿಯ ಸ್ನಾತಕೋತ್ತರ ಕೇಂದ್ರ ಪ್ರಾಧ್ಯಾಪಾಕ ಪ್ರೊ.ಎಂ. ಶಂಕರ್ ಮಾತನಾಡಿ, ಕನ್ನಡ ಭಾಷೆ ನಮ್ಮ ಪರಂಪರೆಯನ್ನು ಬಿಂಬಿಸುವ ಶಕ್ತಿ. ತಲೆಮಾರುಗಳಿಂದ ಉಳಿದು ಬಂದ ಸಂಸ್ಕೃತಿಯನ್ನು ನಮಗೆ ಪರಿಚಯಿಸಿದ್ದು ನಮ್ಮ ಕನ್ನಡ ಮಾತೃಭಾಷೆ. ನಮ್ಮ ನಾಡು ಕುವೆಂಪು ಅವರು ಹೇಳಿರುವಂತೆ ಸರ್ವಜನಾಂಗದ ಶಾಂತಿಯ ತೋಟ. ಇಂದು ನಾವೆಲ್ಲರೂ ನಮ್ಮ ದಿನನಿತ್ಯದ ವ್ಯವಹಾರವನ್ನು, ಆಲೋಚನೆಗಳನ್ನು ಕನ್ನಡದಲ್ಲಿ ಮುಂದುವರಿಸುವುದರ ಅಗತ್ಯವಿದೆ. ಕನ್ನಡ ಭಾಷೆ ಕೇವಲ ಸಂವಹನ ಸಾದನವಲ್ಲ, ಅದು ಭಾವನಾತ್ಮಕ ಬಂಧು ಆಗಿದೆ. ಇದು ನಮ್ಮ ಪೂರ್ವಜರ ಬದುಕಿನ ಅಂಗವಾಗಿ ಸಂವಹನ ಸಾಧ್ಯತೆಯಾಗಿತ್ತು ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ. ವಿಜಯೇಂದ್ರಕುಮಾರ್ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಎಸ್.ಎಂ. ದಾಸ್ತಿಕೊಪ್ಪ ವಂದಿಸಿದರು. ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್. ಸುದೀಪ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net