

ಮೈಸೂರು: ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟದ ವತಿಯಿಂದ ನ.26ರಂದು ಬೆಳಗ್ಗೆ 9.30ಕ್ಕೆ ನಗರದ ಕಲಾಮಂದಿರದಲ್ಲಿ ಕನ್ನಡ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ರಾಜೇಂದ್ರ ಪೈ ತಿಳಿಸಿದರು.
ಬೇರೆ ರಾಜ್ಯದ ಬ್ಯಾಂಕ್ ಉದ್ಯೋಗಿಗಳಿಗೆ ಇಂಗ್ಲಿಷ್‌ನಲ್ಲಿ ಕೇಳುವೆ ಕನ್ನಡದಲ್ಲಿ ಹೇಳು ಸ್ಪರ್ಧೆ, ಉದ್ಯೋಗಿಗಳು, ನಿವೃತ್ತರು, ಅವರ ಕುಟುಂಬದವರಿಗೆ ರಂಗೋಲಿ ಸ್ಪರ್ಧೆ, ಬೆಂಕಿ ಬಳಸದೇ ಅಡುಗೆ, ಕಸದಿಂದ ರಸ, ಕನ್ನಡ ಗಾದೆ, ಒಗಟು, ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಅಂತ್ಯಾಕ್ಷರಿ ಮೊದಲಾದ ಸ್ಪರ್ಧೆ ನಡೆಯಲಿವೆ. ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.25ರಂದು ಬೆಳಗ್ಗೆ 7ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತರ ಬ್ಯಾಂಕ್ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಂಕ್ ಸಿಬ್ಬಂದಿ, ನಿವೃತ್ತರು ಹಾಗೂ ಕುಟುಂಬದ ಸದಸ್ಯರಿಗಾಗಿ ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಾಮಚಂದ್ರ, ಶಂಕರ ಸುಬ್ರಹ್ಮಣ್ಯ, ಸ್ನೇಹಾ, ಆನಂದಕುಮಾರ್, ರಾಧಾಕೃಷ್ಣ ಹಾಗೂ ರಘುರಾಂ ಮತ್ತಿತರರಿದ್ದರು.