ಹೋರಾಟಗಾರರನ್ನು ಗೌರವಿಸುವುದು ಕಡಿಮೆ

ctd 13 karunuda sene-01
Published on

ಚಿತ್ರದುರ್ಗ: ಜಿಲ್ಲೆ ಅಭಿವೃದ್ಧಿಗೆ ಹೋರಾಟ ನಡೆಸುವವರ ಜತೆ ಸದಾ ನಾವಿರುತ್ತೇವೆ ಎಂದು ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಡಾ.ಶಾಂತ ವೀರ ಮಹಾಸ್ವಾಮೀಜಿ ಹೇಳಿದರು. ಕರುನಾಡ ವಿಜಯಸೇನೆ ಜಿಲ್ಲಾ ಘಟಕ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾನು ವಾರ ಆಯೋಜಿಸಿದ್ದ ಕನ್ನಡ ಹಬ್ಬದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಗಾಗಿ ನಡೆಸಿದ್ದ ಹೋರಾಟಕ್ಕೆ,ಪ್ರಥಮದಲ್ಲಿ ರಾಜಕಾರಣಿಗಳ ಬೆಂಬಲ ಸಿಗಲಿಲ್ಲ. ಬಡವರು,ಶೋಷಿತ ರು,ಹಿಂದುಳಿದವರ ಪರ ಹೋರಾಟಗಾರರನ್ನು ಗೌರವಿಸುವುದು ತುಂಬಾ ಕಡಿಮೆ. ಹೋರಾಟಗಾರರು ಸಾಕಷ್ಟು ಅವಮಾನ, ಕೇಸು ಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕಾಗಿ ಶಿವಕುಮಾರ್ ಮೊದಲಿ ನಿಂದಲೂ ಹೋರಾಟ ಮಾಡಿ ಕೊಂಡು ಬರುತ್ತಿದ್ದಾರೆ ಎಂದರು.

ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ,ಮೆಡಿಕಲ್ ಕಾಲೇಜು ಸ್ಥಾ ಪನೆಗೆ ರಾಜಕಾರಣಿಗಳಲ್ಲಿ ಇಚ್ಚಾಶಕ್ತಿ ಬೇಕು. ಚಿತ್ರದುರ್ಗದ ಕನ್ನಡದಲ್ಲಿ ಸಾಹಿತ್ಯವಿದೆ. ಯೋಧರಿಂದಾಗಿ ನಾವು ಸುರಕ್ಷಿತವಾಗಿದ್ದೇವೆ. ಪೌರ ಕಾರ್ಮಿಕರು,ಶವ ಮಹಜರು ನಡೆಸುವವರು,ಕ್ಷೌರಿಕರು,ಮಡಿವಾಳರನ್ನು ಸನ್ಮಾನಿಸುತ್ತಿರುವುದು ಪುಣ್ಯದ ಕೆಲಸವೆಂದರು.

ರಾಜವೀರ ಮದಕರಿನಾಯಕ ರಾಜ್ಯಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ ಕುಂ.ವೀರಭದ್ರಪ್ಪ,ಐತಿಹಾಸಿಕ ನಗರಿ ಚಿತ್ರದುರ್ಗ ಪ್ರಕೃ ತಿ ಸೌಂದರ್ಯದಿಂದ ಕೂಡಿದೆ. ಇಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಇಲ್ಲಿ ಆರಂಭವಾಗಬೇಕು. ಸರ್ಕಾರಿ ಮೆಡಿಕಲ್ ಕಾಲೇಜು ಬೇಕು. ಸೈನಿಕರು ನಿಜವಾದ ದೇವರು. ನಿವೃತ್ತ ಸೈನಿಕರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಬೆಳಗಾವಿ, ಬಳ್ಳಾರಿ,ಚಾಮರಾಜನಗರ ಗಡಿ ಭಾಗಗಳನ್ನು ಸರ್ಕಾರ ನಿರ್ಲಕ್ಷಿಸ ಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯಕರುನಾಡ ವಿಜಯಸೇನೆ ಸಂಸ್ಥಾಪಕ ಅಧ್ಯಕ್ಷ ಎಚ್.ಎಸ್.ದೀಪಕ್,ಭಾಷೆ ಉಳಿವಿಗಾಗಿ ಯಾರಿಗೂ ಜಗ್ಗುವು ದಿಲ್ಲ. ನಿರಂತರ ಹೋರಾಟ ನಮ್ಮದಾಗಿರುತ್ತದೆ. ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜಿಗೆ ಶೀಘ್ರ ಭೂಮಿ ಪೂಜೆ ಆಗಬೇಕೆಂದು ಸರ್ಕಾರ ವನ್ನು ಒತ್ತಾಯಿಸಿದರು.

ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹತ್ತು ಸಾವಿರ ಸಹಜ ಹೆರಿಗೆ ಮಾಡಿಸಿರುವ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪಾಳ್ಯದ ಡಾ.ನಿಸಾರ್ ಫಾತಿಮ ಅವರಿಗೆ ವೀರವನಿತೆ ಒನಕೆ ಓಬವ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಕರುನಾಡ ವಿಜಯಸೇನೆ ಗೌರವಾಧ್ಯಕ್ಷ ಕೆ.ಆರ್. ಸಚ್ಚಿದಾನಂದ,ಪದಾಧಿಕಾರಿಗಳಿದ್ದರು. ಕಂಬದ ರಂಗಯ್ಯ ತಂಡದವರು ಸಾಂಸ್ಕೃತಿಕ ಕಾರ‌್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net