

ಬೀರೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಶುಕ್ರವಾರ ಆರಂಭಗೊಂಡಿದ್ದು, ಪರೀಕ್ಷಾ ಕೇಂದ್ರ ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಪುನರಾವರ್ತಿತ ಮತ್ತು ಖಾಸಗಿಯೂ ಸೇರಿ 266 ವಿದ್ಯಾರ್ಥಿಗಳ ಪೈಕಿ 239 ಮಂದಿ ಹಾಜರಾದರೆ 27ವಿದ್ಯಾರ್ಥಿಗಳು ಗೈರಾದರು. ಕೆಎಲ್‌ಕೆ ಪದವಿಪೂರ್ವ ಕಾಲೇಜಿನ 96, ಅರುಣೋದಯ ಪದವಿಪೂರ್ವ ಕಾಲೇಜಿನ 67, ಯಗಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ 41 ಮತ್ತು ಕಾನ್ಪಿಡೆಂಟ್ ಪಿಯು ಕಾಲೇಜಿನ 62 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕರೂ ಸೇರಿದಂತೆ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು. ಪಾರದರ್ಶಕ ಪರೀಕ್ಷೆಗಳನ್ನು ನಡೆಸುವ ಸಲುವಾಗಿ ಸಿಸಿ ಟಿವಿ ಅಳವಡಿಸಲಾಗಿತ್ತು.