ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಡ ಪ್ರಬಂಧ ಸ್ಪರ್ಧೆ ಆಯೋಜನೆ

Published on

ಮೈಸೂರು: ರಾಜ್ಯದ ಮೊದಲ ಮಹಿಳಾ ಸಚಿವೆ ಯಶೋಧರಾ ದಾಸಪ್ಪ ಅವರ 120ನೇ ಜನ್ಮ ದಿನದ ಅಂಗವಾಗಿ ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅವರ ಬದುಕು, ರಾಜಕೀಯ ಮತ್ತು ಸಮಾಜಸೇವಾ ಕಾರ್ಯದ ಕುರಿತು ಕನ್ನಡ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಯು 3 ವಿಭಾಗದಲ್ಲಿ ನಡೆಯಲಿದ್ದು, 18 ವರ್ಷದೊಳಗಿನ ವಿಭಾಗ, 19ರಿಂದ 30 ವರ್ಷದೊಳಗಿನ ವಿಭಾಗ ಹಾಗೂ 31ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ಪರ್ಧೆ ಇರಲಿದೆ ಎಂದು ಸಂಘದ ಅಧ್ಯಕ್ಷೆ ಜೆ.ಶೋಭಾ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು 300ರಿಂದ 500 ಪದಗಳಲ್ಲಿ ಕನ್ನಡದಲ್ಲಿ ಬರಹ ಬರೆದು ಜೂ.9ರೊಳಗೆ ಖುದ್ದಾಗಿ, ಅಂಚೆ ಅಥವಾ ಇ-ಮೇಲ್ ್ಞಛಿಜಜ್ಝಿಟಜಜಿಞಟ್ಟಛಿಃಜಞಜ್ಝಿ.್ಚಟಞ ಮೂಲಕ ಅಧ್ಯಕ್ಷರು, ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘ, ನೇಗಿಲಯೋಗಿ ಮರುಳೇಶ್ವರ ಸೇವಾ ಭವನ, ಹೊಸ ನ್ಯಾಯಾಲಯದ ಎದುರು, ಜಯನಗರ, ಮೈಸೂರು. ಇಲ್ಲಿಗೆ ಕಳುಹಿಸುವಂತೆ ತಿಳಿಸಿದ್ದಾರೆ.
ಆಯ್ಕೆಯಾದ ಮೊದಲ 3 ಪ್ರಬಂಧಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ಜೂನ್ 13ರಂದು ಆಯೋಜಿಸಲಿರುವ ಯಶೋಧರಾ ದಾಸಪ್ಪ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು. ಮಾಹಿತಿಗೆ ಮೊ.9448392488 ಅಥವಾ 9113201893 ಸಂಪರ್ಕಿಸಲು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net