

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ಕಾರಗಳ ಇಚ್ಚಾಶಕ್ತಿ ಹಾಗೂ ಕನ್ನಡಿಗರ ಸ್ವಾಭಿಮಾನದ ಕೊರತೆಯಿಂದ ಕನ್ನಡ ಸಾರ್ವಭೌಮತ್ವ ಪಡೆದುಕೊಂಡಿಲ್ಲ ಎಂದು ಡಾ. ಎಂ.ಎ0. ಕಲಬುರ್ಗಿ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ. ವೀರಣ್ಣ ರಾಜೂರ ಕಳವಳ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಮಂಗಳವಾರ ಜರುಗಿದ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ನುಡಿಗಳನ್ನಾಡಿದರು.
ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಹೊಸ ಆವಿಷ್ಕಾರ ನೀಡಿತು. ಅದಕ್ಕೆ ಕೊಡುಗೆ ನೀಡಿದ ಬಸವಣ್ಣನ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಗ್ರಂಥ ಪ್ರಕಟಣೆ ಇಂದು ಗ್ರಂಥೋದ್ಯಮವಾಗಿದೆ. ಪುಸ್ತಕಗಳ ಸಂಖ್ಯೆ ಬೆಳೆಸಿಕೊಂಡು ಸಾಹಿತಿಯಾಗಲು ಹೋಗಬೇಡಿ. ಅದರಲ್ಲಿ ಸತ್ವ ಬೆಳೆಸಬೇಕು. ಅಧ್ಯಯನಶೀಲತೆ, ಬದ್ಧತೆ ಇದ್ದಾಗ ಮಾತ್ರ ಉತ್ತಮ ಪಠ್ಯ ಬರಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಸರ್ವಾಂಗೀಣ ಬದುಕಿಗಾಗಿ ಉತ್ತಮ ಪಠ್ಯಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರು ಗಮನ ಹರಿಸಬೇಕು. ಗೊತ್ತುವಳಿಗಳನ್ನು ಕೇವಲ ಮಂಡಿಸದೆ ಮುಂದಿನ ಸಮ್ಮೇಳನದೊಳಗೆ ಜಾರಿಗೆ ತರುವ ಕೆಲಸವಾಗಬೇಕು. ವಚನ ಸಾಹಿತ್ಯಕ್ಕೆ ಎಸ್.ಆರ್. ಗುಂಜಾಳ ಅವರ ಕೊಡುಗೆ ಅನನ್ಯ. ಅವರು ಉತ್ತಂಗಿ ಚನ್ನಯ್ಯನವರ ಬಗ್ಗೆ ಆಳ ಅಧ್ಯಯನ ಮಾಡಿದ್ದಾರೆ. ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷ ಮಾಡಿದ್ದು ಗಮನಾರ್ಹವಾಗಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ. ಎಸ್.ಆರ್. ಗುಂಜಾಳ ಅವರನ್ನು ಗೌರವಿಸಲಾ¬ತು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗೌರಮ್ಮ ನ್ಯಾಮತಿ, ಕೆ.ಎಸ್. ಕೌಜಲಗಿ, ಶಶಿಧರ ತೋಡಕರ, ಇತರರು ಮಾತನಾಡಿದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಎಸ್.ಎಚ್. ಪ್ರತಾಪ್, ಶಾಂತವೀರ ಬೆಟಗೇರಿ ನಿರ್ವಹಿಸಿದರು. ಡಾ. ಎಸ್.ಎಸ್. ದೊಡಮನಿ ನಿರೂಪಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.