ನುಡಿ ಡಿಂಡಿಮ ನಾಳೆಯಿಂದ

kannada
Published on

ಹುಬ್ಬಳ್ಳಿ: ರಾಜ್ಯೋತ್ಸವ ನಿಮಿತ್ತ ವಿದ್ಯಾನಗರ ಬಸವ ಸೇವಾ ಸಮಿತಿ ಹಾಗೂ ಕನ್ನಡ ಕಲಾ ಕೃಷಿ ಬಳಗದ ಆಶ್ರಯದಲ್ಲಿ ನ. 25 ಮತ್ತು 26ರಂದು ನುಡಿ ಡಿಂಡಿಮ, ಜಾನಪದ ಸೌರಭ ಮತ್ತು ನಾಟಕ ಪ್ರದರ್ಶನವನ್ನು ಕಾಳಿದಾಸ ನಗರ ಬಸ್ ನಿಲ್ದಾಣದ ಬಳಿ ನಿರ್ವಿುಸಿರುವ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ಬಸವ ಸೇವಾ ಸಮಿತಿ ಅಧ್ಯಕ್ಷ ಪ್ರೊ. ಶಿವಯೋಗಪ್ಪ ಯಮ್ಮಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಚಲನಚಿತ್ರ ನಟ ರಾಮಕೃಷ್ಣ ಹಾಗೂ ಹಾಸ್ಯ ಭಾಷಣಗಾರ್ತಿ ಸುಧಾ ಬರಗೂರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ನ. 25ರಂದು ಸಂಜೆ 5.45ಕ್ಕೆ ಗಂಗಾವತಿ ಸಿಲ್ಕ್ ಮತ್ತು ಸಾರೀಸ್ ಮಾಲೀಕ ಆನಂದ ಕಮತಗಿ ಉದ್ಘಾಟಿಸುವರು. ಕನ್ನಡ ಕಲಾ ಕೃಷಿ ಬಳಗದ ಅಧ್ಯಕ್ಷ ಕೆ.ಸಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಕನ್ನಡ ಕೃಷಿ ಬಳಗದಿಂದ ಡಾ. ರಾಮು ಮೂಲಗಿ, ಪ್ರೀತಿ ಸತೀಶ, ಡಾ. ಶಾಂತಣ್ಣ ಕಡಿವಾಲ ಅವರಿಗೆ ‘ಕನ್ನಡ ರತ್ನ’ ಪ್ರಶಸ್ತಿ, ಬಸವ ಸೇವಾ ಸಮಿತಿಯಿಂದ ಡಾ. ಅವಿನಾಶ ಕವಿ, ದಿಲೀಪ ಶರ್ವ, ಡಾ. ಮುರಳಿಧರ ದೊಡ್ಡಮನಿ ಅವರಿಗೆ ಬಸವಶ್ರೀ ಪ್ರಶಸ್ತಿ ಕೊಡಮಾಡಲಾಗುವುದು ಎಂದರು.

ನ. 26ರಂದು ಸಂಜೆ 5.45ಕ್ಕೆ ಡಾ. ಶಂಭು ಬಳಿಗಾರ ಅವರಿಂದ ಜಾನಪದ ಸೌರಭ, ಹುಬ್ಬಳ್ಳಿಯ ಜೀವಿ ಕಲಾ ತಂಡದವರಿಂದ ಗಾನಯೋಗಿ ಪಂ. ಪುಟ್ಟರಾಜ ಗವಾಯಿಗಳು ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಡಾ. ಎಚ್.ವಿ. ಬೆಳಗಲಿ, ಸಿ.ಕೆ. ಮಾಲಿಪಾಟೀಲ, ಡಾ. ಬಿ.ಎಸ್. ಮಾಳವಾಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net