ಹುಬ್ಬಳ್ಳಿ: ಮೈಸೂರ್ ಸಂಸ್ಥಾನವು ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದ ದಿನದ ಅಂಗವಾಗಿ ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘ ಹಾಗೂ ಯುವ ಕರ್ನಾಟಕ ವೇದಿಕೆ ವತಿಯಿಂದ ಆಗಸ್ಟ್ 9ರಂದು ಬೆಳಗ್ಗೆ 10ಕ್ಕೆ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಕನ್ನಡ ಧ್ವಜ ವಿತರಣೆ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಮನೆ ಮನೆಗಳ ಮೇಲೆ ಕನ್ನಡದ ಬಾವುಟ ಹಾರಿಸಬೇಕು. ಸಂಘದಿಂದ ಆಟೋ ರಿಕ್ಷಾಗಳಿಗೆ ಉಚಿತ ಕನ್ನಡದ ಬಾವುಟ ವಿತರಿಸಲಾಗುವುದು.
ನಗರದ ಚನ್ನಮ್ಮನ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕೇಶ್ವಪುರ ಬಸವೇಶ್ವರ ವೃತ್ತ, ಗಬ್ಬೂರ ಬೈಪಾಸ್ ವೃತ್ತ, ಚಿಟುಗುಪ್ಪಿ ಆಸ್ಪತ್ರೆ, ಭಗತ್ ಸಿಂಗ್ ಸರ್ಕಲ್ ನಲ್ಲಿ ಕನ್ನಡ ಧ್ವಜ ಸ್ತಂಭಗಳಿಗೆ ಹೊಸ ಬಾವುಟ ಹಾಕಲಾಗುವುದು ಎಂದು ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ತಿಳಿಸಿದ್ದಾರೆ.