ಮಕ್ಕಳನ್ನು ಕೇಂದ್ರವಾಗಿಟ್ಟು ಸಾಹಿತ್ಯ ಬೆಳೆಸೋಣ: ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ

sahithya parishath
Published on

ಶಿರ್ವ: ಉಪದೇಶ ಮಾಡುವುದು ಸುಲಭ, ಅನುಷ್ಠಾನ ಕಷ್ಟ. ಪುಸ್ತಕಗಳನ್ನು ಓದುವ, ಉಪನ್ಯಾಸ ಕೇಳುವ, ಮನನ ಮಾಡುವುದರಿಂದ ಜ್ಞಾನವೃದ್ಧಿಯಾಗುತ್ತದೆ ಎಂದು ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜರುಗಿದ ಕನ್ನಡ ದೀಪೋತ್ಸವ ಸಂಭ್ರಮ ಹಾಗೂ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳನ್ನು ಕೇಂದ್ರವಾಗಿರಿಸಿ, ಸಾಹಿತ್ಯದ ಕಾರ್ಯ ಮಾಡಿದರೆ ಅದು ಸಮಾಜಕ್ಕೆ ಕೊಡುವ ಮಹತ್ತರ ಕೊಡುಗೆಯಾಗಿದೆ. ಪ್ರಾಮಾಣಿಕ ಪ್ರಯತ್ನಕ್ಕೆ ಸೋಲು ಎಂಬುವುದಿಲ್ಲ. ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯ ಬೆಳೆಸಬೇಕು ಎಂದರು.

ಕನ್ನಡದ ಕಟ್ಟಾಳು, ಸಾಹಿತ್ಯಪ್ರೇಮಿ, ಸಂಘಟಕ ಶಿರ್ವ ಹೊಸಂಗಡಿ ಶಿವಾನಂದ ಕಾಮತ್, ಗಂಗಾ ಕಾಮತ್ ದಂಪತಿಯನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡ 116ನೇ ಕಾರ್ಯಕ್ರಮ ಇದಾಗಿದ್ದು, ಕನ್ನಡ ನಾಡುನುಡಿ ಸಂಸ್ಕೃತಿ, ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಹಿರಿಯರನ್ನು ಗುರುತಿಸಿ, ಅವರ ಮನೆಯಲ್ಲಿಯೇ ಕೃತಜ್ಞತಾಪೂರ್ವಕವಾಗಿ ಗೌರವಿಸಲಾಗುತ್ತಿದೆ. ಪ್ರತಿಯೊಬ್ಬ ಸಾಧಕನ ಸಾಧನೆಯನ್ನು ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯವನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ , ಖ್ಯಾತ ಗಾಯಕಿ ವಸಂತಿ ಆರ್ ಶೆಣೈ, ಹರಿಕಷ್ಣ ಎನ್ ಭಟ್, ಗುರುಗಣೇಶ್ ಎನ್ ಭಟ್, ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ವಿದ್ಯಾ ಅಮ್ಮಣ್ಣಾಯ, ಸದಸ್ಯರಾದ ಕಷ್ಣಕುಮಾರ್ ಮಟ್ಟು, ಸುದಕ್ಷಿಣೆ, ನಿವತ್ತ ಪ್ರಾಚಾರ್ಯ ಗಣಪತಿ ಭಟ್, ಅನಂತ ಮೂಡಿತ್ತಾಯ, ಕೆ,ಸುಂದರ ಪ್ರಭು, ದೇವೇಂದ್ರ ನಾಯಕ್, ರಮೇಶ್ ಶೆಣೈ, ದೀಪಕ್ ಕಾಮತ್, ರಮ್ಯಾ ಕಾಮತ್, ವನಿತಾ ಡಿ.ನಾಯಕ್, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್ ಧನ್ಯವಾದವಿತ್ತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net