ನಾಡಿನ ಕಲಾವಿದರನ್ನು ಗೌರವಿಸಿ

dj clk rasamanjari
Published on

ಚಳ್ಳಕೆರೆ: ನಾಡಿನ ಕಲೆ, ಸಂಸ್ಕೃತಿಯ ಸೊಬಗನ್ನು ಕಾಪಾಡಿಕೊಳ್ಳುವ ಸಲುವಾಗಿ ಕಲಾವಿದರನ್ನು ಗೌರವಿಸುವುದು ಅಗತ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.

ಗೋಣಿಬೀಡು ವಿಶ್ವಭಾರತಿ ಯುವ ಬಳಗ, ನೇತಾಜಿ ಸ್ನೇಹ ಬಳಗ, ಸುರಕ್ಷಾ ಪಾಲಿಕ್ಲಿನಿಕ್, ರೋಟರಿ ಕ್ಲಬ್, ಸಂಜೀವಿನಿ ಲ್ಯಾಬ್ ಸಹಯೋಗದಲ್ಲಿ ನಗರದ ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ರಾಜ್‌ಕುಮಾರ್ ಆದಿಯಾಗಿ ಹಿರಿಯ ಕಲಾವಿದರು ಸಿನಿಮಾ ರಂಗದ ಮೂಲಕ ನಾಡಿನ ಕಲೆ, ಸಂಸ್ಕೃತಿ ಮತ್ತು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ.

ಅಂತಹ ಕಲಾವಿದರ ಬದುಕಿನ ಅನುಕರಣೆ ಮಾಡುವ ಜ್ಯೂನಿಯರ್ ಕಲಾವಿದರನ್ನು ಸಮಾಜ ಪ್ರೋತ್ಸಾಹಿಸಬೇಕಿದೆ ಎಂದರು.

ಕಲಾವಿದ ಜಿ.ಎಸ್.ಆರಾಧ್ಯ ಕಲಾ ಪೋಷಣೆಗಾಗಿ ಗೋಣಿಬೀಡಿನಲ್ಲಿ ಕಲಾಧಾಮ ಸ್ಥಾಪಿಸಿರುವುದು ಮಾದರಿ ಕೆಲಸ. ಕಲಾವಿದರ ಬದುಕಿನ ರಕ್ಷಣೆಯಾಗಿರುವ ಕಲಾಧಾಮ ನಿರ್ವಹಣೆಗೆ ವೈಯಕ್ತಿಕ ಧನಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಕೆಪಿಸಿಸಿ ಕರಕುಶಲ ವಿಭಾಗ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಸಾಹಿತ್ಯ ಮತ್ತು ಕಲಾಕ್ಷೇತ್ರಕ್ಕೆ ತಾಲೂಕಿನ ಕೊಡುಗೆ ಅಪಾರವಾಗಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ನಾಡಿನ ಭಾಷೆ, ಕಲೆ ಶ್ರೀಮಂತಗೊಳಿಸುವ ಕಲಾವಿದರನ್ನು ಪ್ರತಿಯೊಬ್ಬರು ಅಭಿಮಾನದಿಂದ ಕಾಣಬೇಕು ಎಂದು ತಿಳಿಸಿದರು.

ಜೂನಿಯರ್ ಅಂಬರೀಶ್ (ಜಿ.ಎಸ್.ಆರಾಧ್ಯ), ವಿಜಾಪುರದ ರವಿಕೋರೆ (ವಿಷ್ಣುವರ್ಧನ್) ಚಾಮರಾಜನಗರ ಚಂದ್ರಶೇಖರ್ (ಶಂಕರ್‌ನಾಗ್), ರಾಜೇಶ್ ಹಂಚಾಟೆ ರವಿಚಂದ್ರನ್ ಪಾತ್ರದಲ್ಲಿ ಅಭಿನಯಿಸಿದರು.

ಮಂಗಳೂರಿನ ಕಲಾವಿದೆ ವಿಜಯಶ್ರೀ, ನಗರಸಭಾ ಸದಸ್ಯ ಕೆ.ವೀರಭದ್ರಯ್ಯ, ಸಾವಿತ್ರಮ್ಮ, ಸಿ.ಬಿ.ಜಯಲಕ್ಷ್ಮಿ, ಎಂ.ಚೇತನ್ ಕುಮಾರ್, ಶಶಿಧರ, ಎಸ್.ಮುಜೀಬ್ ವುಲ್ಲಾ, ಎಂ.ಎನ್.ಮೃತ್ಯುಂಜಯ, ನೇತಾಜಿ ಪ್ರಸನ್ನ, ಬಿ.ಫರೀದ್ ಖಾನ್, ಸೃಷ್ಟಿ ತಿಪ್ಪೇಸ್ವಾಮಿ, ದೊಡ್ಡರಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net