ಕನ್ನಡ ಸಿನಿಮಾ ಬೆಳೆದು ಬಂದ ಹಾದಿ ಛಾಯಾಚಿತ್ರ ಪ್ರದರ್ಶನ

39
Published on

ಮೈಸೂರು: ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರು ಸೋಮವಾರ ನಗರದ ಐನಾಕ್ಸೃ್ ಚಿತ್ರಮಂದಿರದಲ್ಲಿರುವ ಕನ್ನಡ ಸಿನಿಮಾ ಬೆಳೆದು ಬಂದ ಹಾದಿ ಕುರಿತು ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದರು.
ಎರಡು ದಶಕಗಳ ಹಿಂದಿನ ಕಪ್ಪು ಬಿಳಿಪಿನ ಅಪರೂಪದ ಛಾಯಾಚಿತ್ರಗಳ ಸಂಗ್ರಹ ಅಮೂಲ್ಯವಾದದ್ದು. ಸಿನಿಮಾ ಛಾಯಾಗ್ರಾಹಕರಾದ ಪ್ರಗತಿ ಅಶ್ವಥ್ ನಾರಾಯಣ್ ಸೆರೆ ಹಿಡಿದಿರುವ ಹಾಗೂ ಸಂಗ್ರಹಿಸಿರುವ ಕೆಲಸ ಶ್ಲಾಘನೀಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಚಲನಚಿತ್ರೋತ್ಸವ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ ಕೆ.ವಿ.ಬಸವರಾಜು, ಕಾರ್ಯದರ್ಶಿ ಟಿ.ಕೆ.ಹರೀಶ್, ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕೃಪಾಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net