ಕನ್ನಡ ಭವನಕ್ಕೆ ನಿವೇಶನ ನೀಡಿ

dvd kasapa
ದೇವದುರ್ಗದಲ್ಲಿ ಪುರಸಭೆ ಕಂದಾಯ ಅಧಿಕಾರಿ ರಂಗಪ್ಪ ಕಸಾಪ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಸಂಘಟನೆ ಕಾರ್ಯದರ್ಶಿ ಶಿವರಾಜ್ ರುದ್ರಾಕ್ಷಿ, ಮಲ್ಲಪ್ಪ ಗೌಡೂರ, ಸತ್ಯನಾರಾಯಣ ಗುರುಗುಂಟಾ ಇತರರಿದ್ದರು.
Published on

ದೇವದುರ್ಗ: ನಾಡು, ನುಡಿ, ಸಾಹಿತ್ಯ ಕಾರ್ಯಕ್ರಮ ನಡೆಸಲು ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಬೇಕೆಂದು ಒತ್ತಾಯಿಸಿ ಪಟ್ಟಣದ ಪುರಸಭೆ ಕಚೇರಿ ಮುಂದೆ ಕಂದಾಯ ಅಧಿಕಾರಿ ರಂಗಪ್ಪಗೆ ಕಸಾಪ ತಾಲೂಕು ಘಟಕ ಬುಧವಾರ ಮನವಿ ಸಲ್ಲಿಸಿತು.

ನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸುವ ಕಲೆ, ಸಾಹಿತ್ಯ, ಸಂಗೀತ, ನಾಟಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಸ್ವಂತ ಭವನದ ಕೊರತೆಯಿದೆ. ಇದರಿಂದ ಖಾಸಗಿ ಭವನ, ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸುವ ಪರಿಸ್ಥಿತಿಯಿದೆ. ಕನ್ನಡ ಭವನ ನಿರ್ಮಿಸುವಂತೆ ಹಲವು ಸಲ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆತಿಲ್ಲ ಎಂದು ದೂರಿದರು.

ಬಜೆಟ್‌ನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಜಾಗ ನೀಡುವ ಬಗ್ಗೆ ಘೋಷಣೆ ಮಾಡಬೇಕು. ಈ ಬಗ್ಗೆ ಬಜೆಟ್ ವೇಳೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಸಂಘಟನೆ ಕಾರ್ಯದರ್ಶಿ ಶಿವರಾಜ್ ರುದ್ರಾಕ್ಷಿ, ಮಲ್ಲಪ್ಪ ಗೌಡೂರ, ಸತ್ಯನಾರಾಯಣ ಗುರುಗುಂಟಾ, ರಾಘವೇಂದ್ರ ಅಂಜಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net