₹2 ಕೋಟಿ ವೆಚ್ಚದಲ್ಲಿ ತಲೆಯೆತ್ತಲಿದೆ ಕನ್ನಡ ಭವನ

1
ಬಂಗಾರಪೇಟೆ ಪುರಸಭೆ ಆವರಣದಲ್ಲಿ ಕನ್ನಡ ಭವನ ನಿರ್ವಾಣ ಕುರಿತ ಸವಾಲೋಚನಾ ಸಭೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ್, ಸದಸ್ಯ ಕೆ.ಚಂದ್ರಾರೆಡ್ಡಿ ಇದ್ದರು.
Published on

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾಹಿತಿ ಮೂರು ಬಾರಿ ಭೂಮಿಪೂಜೆ ಮಾಡಿದರೂ ಆರಂಭಗೊಳ್ಳದ ಕಾಮಗಾರಿ

ಬಂಗಾರಪೇಟೆ: ನಿವೇಶನವಿದ್ದರೂ ಹಲವು ದಶಕಗಳಿಂದ ನಿರ್ಮಾಣವಾಗದೆ ಇರುವ ಕನ್ನಡ ಭವನವನ್ನು ಪುರಸಭೆ ಮತ್ತು ಕನ್ನಡಪರ ಸಂಟನೆಗಳ ಸಹಯೋಗದಲ್ಲಿ ಸುವಾರು 2ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಭವನ ನಿರ್ವಾಣ ಕುರಿತ ಸವಾಲೋಚನಾ ಸಭೆಯಲ್ಲಿ ವಾತನಾಡಿ, ಗಡಿಭಾಗದಲ್ಲಿ ಕನ್ನಡ ಭಾಷೆ, ನೆಲ ಮತ್ತು ಜಲ ಸಂರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಸಂಟನೆಗಳು ನಿರಂತರವಾಗಿ ಶ್ರಮಿಸಿವೆ. ಪಟ್ಟಣದಲ್ಲಿ ಭವನ ನಿರ್ಮಿಸುವ ಸಲುವಾಗಿ 1976ರಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 50*100 ಅಡಿ ವಿಸ್ತೀರ್ಣದ ನಿವೇಶನ ಮಂಜೂರು ವಾಡಲಾಗಿತ್ತು. 45 ವರ್ಷ ಕಳೆದರೂ ಇದುವರೆಗೂ ಭವನ ನಿರ್ವಾಣ ಸಾಧ್ಯವಾಗಲಿಲ್ಲ. ಆದರೆ, ಇಂದು ಕನ್ನಡಪರ ಸಂಟನೆಗಳ ಮುಖಂಡರು ಮತ್ತು ಪುರಸಭಾ ಸದಸ್ಯರ ಸಹಯೋಗದಲ್ಲಿ ಕರೆದಿರುವ ಸಭೆಯಲ್ಲಿ ಸಮಿತಿ ರಚಿಸಿ ಸಮಿತಿಯ ಮೂಲಕ ಭವನ ನಿರ್ಮಿಸಲು ಸಮ್ಮತಿ ದೊರೆತಿರುವುದು ಸಂತಸ ತಂದಿದೆ. ಶ್ರೀದಲ್ಲಿ ಭವನ ನಿರ್ವಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ್, ಸದಸ್ಯರಾದ ಕೆ.ಚಂದ್ರಾರೆಡ್ಡಿ, ಶಂಶುದ್ದೀನ್ ಬಾಬು, ಆರೋಗ್ಯರಾಜನ್, ಎಸ್.ವೆಂಕಟೇಶ್, ಸುನೀಲ್, ರ್ಜಾನ ಸುಹೇಲ್, ರಾಕೇಶ್ ಗೌಡ, ಗಂಗಮ್ಮ, ಪೊನ್ನಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಮಪ್ರಸಾದ್, ನಾಗರಾಜ್, ಲೀಲಾವತಿ, ಜೈ ಕರ್ನಾಟಕ ರಕ್ಷಣಾ ವೇದಿಕೆಯ ಚಿನ್ನಿ ವೆಂಕಟೇಶ್, ಶ್ರೀನಿವಾಸ್ ಇದ್ದರು.

ಎಲ್ಲರ ಸಹಕಾರದಲ್ಲೇ ನಿರ್ಮಾಣವಾಗಲಿ

ಸಭೆಯ ಆರಂಭದಲ್ಲಿ ಕನ್ನಡ ಸಂದ ಅಧ್ಯಕ್ಷ ಪಲ್ಲವಿ ಮಣಿ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ 10 ಲಕ್ಷ ರೂ. ಮಂಜೂರು ವಾಡಿದೆ. ಇದರೊಟ್ಟಿಗೆ ಸಂದ ಆಜೀವ ಸದಸ್ಯತ್ವ ನೋಂದಣಿ ಶುಲ್ಕ, ಮತ್ತು ನಾನು ಸ್ವಂತ 10 ಲಕ್ಷ ರೂ. ನೀಡುತ್ತೇನೆ, ನಮ್ಮ ನೇತೃತ್ವದಲ್ಲೇ ಕನ್ನಡ ಭವನ ನಿರ್ವಾಣ ವಾಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಸಭೆಯಲ್ಲಿ ಹಲವರಿಂದ ಆಕ್ಷೇಪ ವ್ಯಕ್ತವಾಯಿತು. ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ ಮಧ್ಯಪ್ರವೇಶಿಸಿ, ಪಲ್ಲವಿ ಮಣಿ ನೇತೃತ್ವದಲ್ಲಿ ಭವನ ನಿರ್ವಾಣಕ್ಕೆ ಮೂರು ಬಾರಿ ಅವಕಾಶ ನೀಡಲಾಗಿತ್ತು. ಇದುವರೆಗೂ ಭವನ ನಿರ್ವಾಣವಾಗಲಿಲ್ಲ. ಒಬ್ಬರಿಂದ ನಿರ್ಮಿಸಲು ಸಾಧ್ಯವಿಲ್ಲ. ಹಾಗಾಗಿ ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿ, ಎಲ್ಲರ ಸಹಕಾರದಲ್ಲಿ ಭವನ ನಿರ್ವಾಣವಾಗಲಿ ಎಂದು ಆಗ್ರಹಿಸಿದರು.

ನಿರ್ಮಿತಿ ಕೇಂದ್ರಕ್ಕೆ ನಿರ್ಮಾಣ ಹೊಣೆ

ಈ ಸಮಿತಿ ಮೂಲಕ ಭವನ ನಿರ್ಮಿಸಲು ಒಪ್ಪಿಗೆ ದೊರೆತಿದ್ದು, ಈಗಾಗಲೇ ಪುರಸಭೆಯಲ್ಲಿ 40 ಲಕ್ಷ ರೂ. ಅನುದಾನವಿದ್ದು, ಸರ್ಕಾರದಿಂದ 1.5 ಕೋಟಿ ರೂ. ಅನುದಾನ ಪಡೆದು 2 ಕೋಟಿ ರೂ.ವೆಚ್ಚದಲ್ಲಿ ಭವನ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗುತ್ತದೆ. ನಿರ್ವಾಣದ ಕಾರ್ಯವನ್ನು ನಿರ್ಮಿತಿ ಕೇಂದ್ರಕ್ಕೆ ನೀಡಿ, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ನಾರಾಯಣಸ್ವಾಮಿ ಭರವಸೆ ನೀಡಿದರು.

ಪುರಸಭೆ ಆವರಣದಲ್ಲಿ ರಾಜ್ಯೋತ್ಸವ

ನ.1ರಂದು ಅದ್ದೂರಿ ರಾಜ್ಯೋತ್ಸವ ಆಚರಿಸಲು ಈಗಾಗಲೇ ತೀರ್ವಾನ ಕೈಗೊಂಡಿದ್ದು, ಪುರಸಭೆ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂಬೇಡ್ಕರ್ ಪ್ರತಿಮೆಗೆ ವಾಲಾರ್ಪಣೆ ವಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.

ಸಮಿತಿ ರಚನೆ

ಭವನ ನಿರ್ಮಾಣ ಸಮಿತಿಗೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಧ್ಯಕ್ಷ, ಗೌರವ ಅಧ್ಯಕ್ಷರಾಗಿ ಕೆ.ಚಂದ್ರಾರೆಡ್ಡಿ, ಉಪಾಧ್ಯಕ್ಷರಾಗಿ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಕಾರ್ಯದರ್ಶಿಯಾಗಿ ಪಲ್ಲವಿಮಣಿ ಹಾಗೂ ಇತರೆ ಸಂ-ಸಂಸ್ಥೆಗಳ ಸದಸ್ಯರನ್ನು ಸಮಿತಿಯ ಸದಸ್ಯರನ್ನಾಗಿ ಇದೇ ಸಮಯದಲ್ಲಿ ಆಯ್ಕೆ ವಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net