

ರಾಯಚೂರು ಕನ್ನಡಸೇನೆ ಕರ್ನಾಟಕ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳ ಕನ್ನಡ ಜಾಗೃತಿ ಸಭೆಯನ್ನು ಜೂ.29 ರಂದು ಬೆಳಿಗ್ಗೆ 10.30ಕ್ಕೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಎಂ.ಬಸವರಾಜ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ನಡೆಯುವ ಸಭೆಗೆ ಸಂಘದ - ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ ಆಗಮಿಸಲಿದ್ದು, ಸಭೆಯಲ್ಲಿ ಕನ್ನಡ ನಾಡು, ನುಡಿ, ಜಲ, ನೆಲದ ರಕ್ಷಣೆ, ರಕ್ಷಣೆಗೆ ಬೇಕಾದ ಸಿದ್ದತೆ, ಸಂಘಟನೆಯನ್ನು ಬಲಪಡಿಸಲು ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಸಂಘಟನೆಯ ಹೋರಾಟಗಳ ಬಗ್ಗೆಯೂ ಹಲವು ವಿಚಾರಗಳನ್ನು ರಾಜ್ಯಾಧ್ಯಕ್ಷರು ತಿಳಿಸಲಿದ್ದಾರೆ.
ಆದ್ದರಿಂದ ಸಂಘಟನೆಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಕನ್ನಡ ಪ್ರೇಮಿಗಳು, ಕನ್ನಡಪರ ಚಿಂತಕರು ಸಭೆಗೆ ಆಗಮಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ವೀರೇಶ, ಹನುಮೇಶ ನಾಯಕ, ಚಂದ್ರಶೇಖರ, ವಾಸುದೇವ, ಬಸನಗೌಡ, ರಾಮಪ್ಪ ನಾಯಕ, ಜಗದೀಶ, ನಿಸಾರ್ ಅಹ್ಮದ್ ಇದ್ದರು.