

ಕೋಲಾರ: ವಾತೃಭಾಷೆ ಯಾವುದೇ ಇರಲಿ, ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ತಾಯಿಯಂತೆ ಗೌರವಿಸಿ ಪ್ರೀತಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾ ಆಡಳಿತ ಮತ್ತು ಭುವನೇಶ್ವರಿ ಕನ್ನಡ ಸಂದಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸವಾರಂಭದಲ್ಲಿ ವಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯಾವುದೇ ಕೀಳರಿಮೆ ಇಲ್ಲದೆ ಕನ್ನಡವನ್ನು ಎಲ್ಲೆಡೆ ಬಳಸುವಂತಾಗಬೇಕು, ಆಗಲೇ ಭಾಷೆಯ ಸಮಗ್ರ ಬೆಳವಣಿಗೆ ಸಾಧ್ಯ ಎಂದರು.
ನಮ್ಮ ನಾಡಿನ ಅನೇಕರು ವಿದೇಶಗಳಲ್ಲಿ ಇದ್ದರೂ ತಮ್ಮ ಮನೆಗಳಲ್ಲಿ, ಸವಾರಂಭಗಳಲ್ಲಿ ಕನ್ನಡ ವಾತನಾಡಲು ಹಿಂದೇಟು ಹಾಕುತ್ತಾರೆ. ನಾನು ವಿದೇಶಗಳಿಗೆ ಹೋದಾಗ ಅಲ್ಲಿನ ಕನ್ನಡಿಗರೊಂದಿಗೆ ಕನ್ನಡದಲ್ಲೇ ವಾತನಾಡುವೆ, ವಿವಾನ ನಿಲ್ದಾಣಗಳಲ್ಲೂ ಸಿಬ್ಬಂದಿ ಕನ್ನಡ ವಾತನಾಡಲು ಉತ್ತೇಜನ ನೀಡಿರುವೆ ಎಂದು ಭಾಷಾಭಿವಾನ ಹೊರ ಹಾಕಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನಾಗಾನಂದ ಕೆಂಪರಾಜು ಮಾತನಾಡಿ, ಜಿಲ್ಲೆಯ ಕನ್ನಡ ಪರ ಸಂಟನೆಗಳು ಒಗ್ಗಟ್ಟಿನಿಂದ ಕನ್ನಡಮ್ಮನ ಸೇವೆ ವಾಡಲು ಬದ್ಧತೆ ತೋರಬೇಕಾಗಿದೆ. ನಮ್ಮ ಅವಧಿಯಲ್ಲಿ ಕನ್ನಡಪರವಾದ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಿರಿಯರನ್ನು, ಸಾಧಕರನ್ನು ಗೌರವಿಸಲಾಗಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 10 ಸಾಧಕರನ್ನು ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ಎರಡು ಸಂಸ್ಥೆಗಳಿಗೆ ಡಿಸಿ ಸತ್ಯಭಾಮ ಹಾಗೂ ಅತಿಥಿಗಳು ಪ್ರಶಸ್ತಿ ಪ್ರದಾನ ವಾಡಿದರು.
ಶಿಲ್ಪಿಗಳಾದ ವಾಲೂರಿನ ಮಹಾದೇವ್ ಪಂಚಾಲ್, ಪೂರ್ಣಚಂದ್ರಾಚಾರ್ಯ, ವೈದ್ಯ ಡಾ.ವಿ.ಎಸ್.ಕೃಷ್ಣಮೂರ್ತಿ ಪತ್ರಕರ್ತರಾದ ಪಾ.ಶ್ರೀ.ಅನಂತರಾಮ್, ಎನ್.ಆರ್.ಪುರುಷೋತ್ತಮ್, ಸಂಕೀರ್ಣ ಕ್ಷೇತ್ರದಲ್ಲಿ ಬಿ.ಆರ್.ಶ್ರೀನಿವಾಸಮೂರ್ತಿ, ನಿವೃತ್ತ ಶಿಕ್ಷಕ ನಾರಾಯಣಪ್ಪ, ಕನ್ನಡಪರ ಹೋರಾಟಗಾರರಾದ ರಂಗರಾಮಯ್ಯ, ಗಲ್‌ಪೇಟೆ ಟಿ.ಶ್ರೀನಿವಾಸ, ಶಿಕ್ಷಣ ತಜ್ಞ ಶ್ರೀರಾಮರೆಡ್ಡಿ, ಸಂಗೀತ ವಿದ್ವಾಂಸ ರಾಮಮೂರ್ತಿ, ಜನಪದ ಕ್ಷೇತ್ರದಿಂದ ಮುಳಬಾಗಿಲು ಬಾಲಕೃಷ್ಣಪ್ಪ, ಶಾಸನಗಳ ಸಂಶೋಧಕ ಪ್ರೊ.ಕೆ.ಆರ್.ನರಸಿಂಹನ್, ಕ್ರೀಡೆ ಅಂಚೆ ಅಶ್ವತ್ಥ್, ವಿಶೇಷ ಪ್ರತಿಭೆ ವಿಭಾಗದಲ್ಲಿ ಡಾ.ಡಿ.ಎಸ್.ಶ್ರೀನಿವಾಸಪ್ರಸಾದ್, ಸಾಹಿತ್ಯ ಶಿಕ್ಷಣ ಕ್ಷೇತ್ರದಿಂದ ಕೆ.ಆರ್.ಜಯಶ್ರೀ, ಸಾಹಿತ್ಯ ಕ್ಷೇತ್ರದಿಂದ ವಾ.ವೆಂ.ತಮ್ಮಯ್ಯ, ರಂಗಭೂಮಿ ಕೆ.ಎಂ.ಕೃಷ್ಣಪ್ಪ ಹಾಗೂ ಸಂ ಸಂಸ್ಥೆಗಳ ವಿಭಾಗದಲ್ಲಿ ಕನ್ನಡ ಪಕ್ಷ, ಹಾಗೂ ಆದಿಮ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ಪೈಕಿ ಸವಾಜ ಸೇವಾ ವಿಭಾಗದಲ್ಲಿ ಆಯ್ಕೆಯಾಗಿದ್ದ ಸಾ.ವಾ.ರಂಗಪ್ಪ ವಯಸ್ಸಹಜ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಅವರಿಗೆ ಅವರ ನಿವಾಸದಲ್ಲಿಯೇ ಗೌರವ ಸಮರ್ಪಣೆ ವಾಡುವುದಾಗಿ ಭುವನೇಶ್ವರಿ ಕನ್ನಡ ಸಂದ ಅಧ್ಯಕ್ಷ ಕೆ.ಆರ್.ತ್ಯಾಗರಾಜು ಹೇಳಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಪಾ.ಶ್ರೀ.ಅನಂತರಾಮ್ ಹಾಗೂ ಬಂಗಾರಪೇಟೆಯ ರಂಗರಾಮಯ್ಯ ವಾತನಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ವಿ.ಮುನಿರಾಜು, ಎಡಿಸಿ ಡಾ.ಸ್ನೇಹಾ, ಜನಪದ ಅಕಾಡೆಮಿ ವಾಜಿ ಸದಸ್ಯ ಡಿ.ಆರ್.ರಾಜಪ್ಪ, ಪೌರಾಯುಕ್ತ ಶ್ರೀಕಾಂತ್, ಪತ್ರಕರ್ತರ ಸಂದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಪತ್ರಕರ್ತರ ಸಹಕಾರ ಸಂದ ಅಧ್ಯಕ್ಷ ಕೆ.ಎಸ್.ಗಣೇಶ್, ಕನ್ನಡ ಹೋರಾಟಗಾರ ಆ.ಕೃ.ಸೋಮಶೇಖರ್, ಕನ್ನಡ ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರವಿಕುವಾರ್ ಇತರರು ಉಪಸ್ಥಿತರಿದ್ದರು.
ಜನಪದ ಕಲಾವಿದ ಒಕ್ಕೂಟದ ಅಧ್ಯಕ್ಷ ಮತ್ತಿಕುಂಟೆ ಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಪದ್ಮ ನೇತೃತ್ವದ ಅವಿನಾಶ್ ತಂಡದಿಂದ ವಾದ್ಯಗೋಷ್ಠಿ ನೃತ್ಯ ಕಾರ್ಯಕ್ರಮ ನಾಡಗೀತೆ ನೆರವೇರಿತು.