ಕಂಕಣವಾಡಿ ಪಪಂನಲ್ಲಿ ಅರಳಿದ ಕಮಲ

3
ಕಂಕಣವಾಡಿ ಪಪಂಗೆ ಅಧ್ಯಕ್ಷರಾಗಿ ಪ್ರಕಾಶ ಹುಕ್ಕೇರಿ, ಉಪಾಧ್ಯಕ್ಷರಾಗಿ ರಾಮನಾಯ್ಕ ನಾಯಕ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಶಾಸಕ ಡಿ.ಎಂ.ಐಹೊಳೆ, ವಿಪ ಮಾಜಿ ಸದಸ್ಯ ವಿವೇಕರಾವ ಪಾಟೀಲ ಇತರರಿದ್ದರು
Published on

ರಾಯಬಾಗ: ತಾಲೂಕಿನ ಕಂಕಣವಾಡಿ ಪಟ್ಟಣ ಪಂಚಾಯಿತಿಗೆ ಬಿಜೆಪಿ ಬೆಂಬಲಿತ ಪ್ರಕಾಶ ಹುಕ್ಕೇರಿ ಅಧ್ಯಕ್ಷರಾಗಿ, ರಾಮನಾಯ್ಕ ನಾಯಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿನ ಪಪಂ ಕಾರ್ಯಾಲಯದಲ್ಲಿ ಶಾಸಕ ಡಿ.ಎಂ.ಐಹೊಳೆ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ನೇತೃತ್ವದಲ್ಲಿ ಬುಧವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಸುರೇಶ ಮುಂಜೆ ಘೋಷಿಸಿದರು.

ಬೆಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ್ರಭಾರಿ ಮುಖ್ಯಾಧಿಕಾರಿ ಇಂದು ಶಿಂಗೆ, ಪಪಂ ಸದಸ್ಯರಾದ ರಾಜಶೇಖರ ಖಣದಾಳೆ, ಅಪ್ಪಾಸಾಬ ಬ್ಯಾಕೂಡ, ಲಕ್ಷ್ಮೀ ಬೆಳಕೂಡ, ಕೃಷ್ಣರಾವ ದೇಸಾಯಿ, ನಟರಾಜ ಮಾವರಕರ, ಮಹಾದೇವ ಗದಾಡಿ, ಪಾರ್ವತಿ ಹುಕ್ಕೇರಿ, ಅಣ್ಣಪ್ಪ ನಾಯಿಕ, ಕಸ್ತೂರಿ ಹುಕ್ಕೇರಿ, ರುಕ್ಮವ್ವ ನಾಯಿಕವಾಡಿ, ಪೃಥ್ವಿರಾಜ ಜಾಧವ, ವೀರೇಂದ್ರ ಬ್ಯಾಕೂಡ, ಅಪ್ಪಣ್ಣ ಗಡ್ಕರಿ, ಲಕ್ಷ್ಮೀಕಾಂತ ದೇಸಾಯಿ, ರಮೇಶ ಪೂಜಾರಿ, ಹಾಲಪ್ಪ ಹುಕ್ಕೇರಿ, ಶ್ರೀಶೈಲ ಮೂಡಲಗಿ, ಮೋಹನರಾವ ದೇಸಾಯಿ, ವಿಠ್ಠಲ ಹುಕ್ಕೇರಿ, ಮಹಾಲಿಂಗ ಮುದ್ದಾಪುರ, ನಿಂಗಪ್ಪ ಹುಕ್ಕೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net