ಕಂಕನಾಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾಗಿ ಜೆ. ದಿನೇಶ್ ಅಂಚನ್ ಆಯ್ಕೆ

J DINESH ANCHAN PHOTO
Published on

ಮಂಗಳೂರು : ಕಂಕನಾಡಿ ಗರೋಡಿ ಬಿಲ್ಲವ ಸೇವಾ ಸಮಾಜದ ನೂತನ ಅಧ್ಯಕ್ಷರಾಗಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಮೋಕ್ತೆಸರರು ಆಗಿರುವ ಜೆ ದಿನೇಶ್ ಅಂಚನ್ ರವರು ಆಯ್ಕೆಯಾಗಿದ್ದಾರೆ.

ಶ್ರೀ ಪಿಲಿಚಾಮುಂಡಿ ಕ್ಷೇತ್ರ ತಂದೊಳಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಪ್ಪಿನ ಮೊಗರು ಹಾಗೂ ಪಂಪ್ ವೆಲ್ ಶ್ರೀ ಗಣೇಶೋತ್ಸವ ಸಮಿತಿಯ ಶ್ರೀ ಮಹಾ ಗಣಪತಿ ಸೇವಾ ಪ್ರತಿಷ್ಠಾನದ ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿರುವ ಇವರು ಅನೇಕ ಸಾಮಾಜಿಕ ಹಾಗು ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ದ್ದಾರೆ.

ಇತ್ತೀಚೆಗೆ ನಡೆದ ಕಂಕನಾಡಿ ಗರೋಡಿ ಬಿಲ್ಲವ ಸೇವಾ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು ಹಾಗೂ ಉಪಾಧ್ಯಕ್ಷ ರಾಮಚಂದ್ರ ಸುವರ್ಣ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ , ಜೊತೆ ಕಾರ್ಯದರ್ಶಿ ನಿತೇಶ್ ಸಾಲಿಯಾನ್, ಕೋಶಾಧಿಕಾರಿ ಚಂದ್ರಹಾಸ ಕಟ್ಟಪುನಿ ಅವರು ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಸಂಘಕ್ಕೆ ಒಳಪಟ್ಟ ಆರು ಗ್ರಾಮಗಳ ೩೫ ಜನರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net