

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸರ ಸುಲಿಗೆ ಮಾಡಿದ ಅಂತರ್ ರಾಜ್ಯ ಸುಲಿಗೆಕೋರರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಕಾಸರಗೋಡು ಮೂಲದ ಬಂಟ್ವಾಳ ನಿವಾಸಿ ಮೊಹಮ್ಮದ್ ಆಲಿ ಯಾನೆ ಅಶ್ರು (32) ಮತ್ತು ಬಿ.ಸಿ.ರೋಡ್‌ನ ಜುಬೇರ್(32) ಬಂಧಿತರು.
ಆರೋಪಿಗಳು ಮಂಗಳೂರು ನಗರದ ಬಜಾಲ್‌ನ ಜೆ.ಎಂ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯಿಂದ 16 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 90,000 ರೂ. ಮೌಲ್ಯದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಮೊಹಮ್ಮದ್ ಅಲಿ ಯಾನೆ ಅಶ್ರು ವಿರುದ್ಧ ಕೇರಳ ರಾಜ್ಯದ ಬದಿಯಡ್ಕ, ಮಂಜೇಶ್ವರ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣೆ, ವಿಟ್ಲ ಪೊಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಬರ್ಕೆ ಪೊಲೀಸ್ ಠಾಣೆಗಳಲ್ಲಿ ಮನೆಗಳಿಂದ ಕಳವು,
ಸುಲಿಗೆ ಪ್ರಕರಣ, ಜೈಲಿನಲ್ಲಿ ಹೊಡೆದಾಟ ಸೇರಿ ಈತನ ವಿರುದ್ದ 15 ಪ್ರಕರಣಗಳು ದಾಖಲಾಗಿದೆ.
ಕಂಕನಾಡಿ ನಗರ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಪಿ.ಎಸ್.ಐ ಶಿವಕುಮಾರ್, ಪಿಎಸ್ ಐ ಅನಿತಾ ನಿಕ್ಕಂ, ಎ.ಎಸ್.ಐ ವೆಂಕಟೇಶ್, ಚಂದ್ರಶೇಖರ ಮತ್ತು ಸಿಬ್ಬಂದಿಗಳಾದ ಜಯಾನಂದ, ಕುಶಾಲ್ ಹೆಗ್ಡೆ, ದೀಪಕ್ ಕೊಟ್ಯಾನ್, ರಾಜೇಶ್ ಕೆ.ಎನ್, ರಾಘವೇಂದ್ರ, ಸಂತೋಷ್ ಮಾದರ್ ಮತ್ತು ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.