

ಮಂಗಳೂರು: ನಗರದ ಕಂಕನಾಡಿ ವೃತ್ತದಲ್ಲಿನ ವಾಹನ ಸಂಚಾರ ಸಮಸ್ಯೆಯ ನಿವಾರಣೆಗಾಗಿ ತಾತ್ಕಾಲಿಕವಾಗಿ ಕೆಲವು ಮಾರ್ಪಾಡು ಮಾಡಲಾಗಿದೆ.
ಫಳ್ನೀರ್ ಕಡೆಯಿಂದ ಪಂಪ್‌ವೆಲ್ ಕಡೆಗೆ ಹೋಗುವ ಎಲ್ಲ ವಾಹನಗಳು ಕಂಕನಾಡಿ ವೃತ್ತದಲ್ಲಿ ಎಡಕ್ಕೆ ತಿರುಗಿ ಕರಾವಳಿ ವೃತ್ತದಲ್ಲಿ ಬಲಕ್ಕೆ ತಿರುಗಿ ಮುಂದಕ್ಕೆ ಸಾಗಬೇಕು.
ಫಳ್ನಿರ್ ಕಡೆಯಿಂದ ವೆಲೆನ್ಸಿಯಾ ಕಡೆಗೆ ಹೋಗುವ ಎಲ್ಲ ವಾಹನಗಳು ಕಂಕನಾಡಿ ವೃತ್ತದಲ್ಲಿ ಎಡಕ್ಕೆ ತಿರುಗಿ ಕರಾವಳಿ ವೃತ್ತದಲ್ಲಿ ಯು ಟರ್ನ್ ಪಡೆದು ಮುಂದಕ್ಕೆ ಸಾಗಬೇಕು.
ಫಳ್ನೀರ್ ಕಡೆಯಿಂದ ಮಂಗಳಾದೇವಿ ಕಡೆಗೆ ಹೋಗುವ ವಾಹನಗಳು ಸ್ಟರಕ್ ರಸ್ತೆ, ನಂದಿಗುಡ್ಡ ರಸ್ತೆ ಮುಖಾಂತರ ಕೋಟಿ ಚೆನ್ನಯ ವೃತ್ತವನ್ನು ಬಳಸಿ ಮುಂದೆ ಸಾಗುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟನೆಯಲ್ಲಿ ತಿಳಿಸಿದೆ.