

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿಯ ಸೂಪರ್ ಬಜಾರ್ ಎದುರು ಪಾರ್ಕ್ ಮಾಡಿದ್ದ ಬೈಕ್ ಕಳವಾಗಿದೆ.
ಯಲ್ಲಪ್ಪ ಅವರು ಎಂದಿನಂತೆ ಸೆ.17ರಂದು ರಾತ್ರಿ 8.30ಕ್ಕೆ ಆರೆಂಜ್ ಬಣ್ಣದ ಬಜಾಜ್ ಪಲ್ಸರ್ ಎನ್‌ಎಸ್-125 ಬೈಕ್ ಪಾರ್ಕ್ ಮಾಡಿದ್ದು ಮರುದಿನ ಬೆಳಗ್ಗೆ 6 ಗಂಟೆಗೆ ನೋಡುವಾಗ ಕಳವಾಗಿತ್ತು. ಕಳವಾದ ಬೈಕ್‌ನ ಮೌಲ್ಯ 95,000 ರೂ.ಗಳೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.