ಸದಸ್ಯರ ಒಗ್ಗಟ್ಟಿನಿಂದ ಸಮುದಾಯ ಪ್ರಗತಿ : ಅವಿನಾಶ್ ಕುಲಾಲ್ ಹೇಳಿಕೆ

New Project (15)
Published on

ಬೆಳ್ತಂಗಡಿ: ಸಂಘದ ಮೂಲಕ ನಾವು ಬಲಿಷ್ಠರಾಗಬೇಕು ಮತ್ತು ನಮ್ಮಲ್ಲಿ ಒಗ್ಗಟ್ಟು ಇರಬೇಕು. ಯಾವುದೇ ಸಮುದಾಯದ ಪ್ರಗತಿ ಅದರ ಸದಸ್ಯರ ಒಗ್ಗಟ್ಟು, ಸಹಕಾರದ ಮೇಲೆ ಅವಲಂಬಿತವಾಗಿದೆ. ಯುವಕರು ಸಂಘದ ಮೂಲಕ ಸಕ್ರಿಯವಾಗಿ ತೊಡಗಿಕೊಂಡರೆ ಸಮಾಜದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಬಹುದು ಎಂದು ತಾಲೂಕು ಯುವ ವೇದಿಕೆ ಅಧ್ಯಕ್ಷ ಅವಿನಾಶ್ ಕುಲಾಲ್ ಹೇಳಿದರು.

ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆನ್‌ಲೈನ್ ಛದ್ಮವೇಷ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾಜಸೇವಕ ಅಶೋಕ್ ಕುಲಾಲ್ ಕಣಿಯೂರು ಅವರಿಗೆ ಸಂಘದ ವತಿಯಿಂದ ಸೇವಾ ಸ್ಫೂರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯದರ್ಶಿ ಸುಧೀರ್ ಕೆ.ಎನ್. ಸ್ವಾಗತಿಸಿದರು. ಅಧ್ಯಕ್ಷ ಉಮೇಶ್ ಪಿಲಿಗೂಡು ವಂದಿಸಿದರು. ಮಮಿತಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net