ಗ್ರಾಮಸಭೆಯಲ್ಲಿ ನಿರ್ಣಯವಾದರೂ ಕ್ರಮವಿಲ್ಲ : ಗ್ರಾಮಸ್ಥರ ಅಹವಾಲು ಮಂಡನೆ

New Project (13)
Published on

ವಿಜಯವಾಣಿ ಸುದ್ದಿಜಾಲ ಕಡಬ

ಕಾಣಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಕೊಪ್ಪ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಇಡ್ಯಡ್ಕ ಶಾಲೆಯ ಅವ್ಯವಹಾರದ ಬಗ್ಗೆ ಮತ್ತು ಜನಪ್ರತಿನಿಧಿಗಳಿಗೆ ಅಗೌರವ ತೋರಿಸಿರುವ ಶಿಕ್ಷಕರ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾಪಗೊಂಡರೂ ಏನು ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ನೀಡಿರುವ ಅರ್ಜಿ ವಿವರವನ್ನು ಪಿಡಿಒ ರು ಎನ್.ಬಿ. ನೀಡಿದರು. ಪಂಚಾಯಿತಿ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಅಗೌರವ ತೋರಿಸಿರುವ ಬಗ್ಗೆ ಮತ್ತು ಶಾಲೆಯ ಅವ್ಯವಹಾರದ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಲಾಗಿ ನಿರ್ಣಯ ಕೈಗೊಂಡರೂ ಏನು ಕ್ರಮಕೈಗೊಂಡಿಲ್ಲ. ಅದ್ದರಿಂದ ಜಯಂತ್ ವೈ. ಅವರಿಗೆ ನೀಡಿರುವ ಜಿಲ್ಲಾ ಪ್ರಶಸ್ತಿಯನ್ನು ಹಿಂಪಡೆಯುವಂತೆ ಕ್ರಮ ವಹಿಸಬೇಕು. ಕಾಣಿಯೂರು ಕ್ಲಸ್ಟರ್ ಮಟ್ಟದ ಸಿ.ಆರ್.ಪಿ. ಸರಿಯಾಗಿ ಕರ್ತವ್ಯ ನಿರ್ವಹಿಸಿರುವುದಿಲ್ಲ ಎಂಬುದಾಗಿ ಸಭೆಯಲ್ಲಿ ಪ್ರಸ್ತಾಪಿಸಲಾಗಿ ನಿರ್ಣಯ ಕೈಗೊಂಡರೂ ಏನು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಬಗ್ಗೆಯೂ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಲ್ಲಿಸಿರುವ ದೂರು ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿಯ ಕುರಿತು ಮುಂದಿನ ಕ್ರಮಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಬರೆಯುವುದಾಗಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾ.ಪಂ. ಸದಸ್ಯರಾದ ಗಣೇಶ್ ಉದನಡ್ಕ, ರಾಮಣ್ಣ ಗೌಡ ಮುಗರಂಜ, ಪ್ರವೀಣ್‌ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ಲೋಕಯ್ಯ ಪರವ ದೋಳ್ಪಾಡಿ, ದೇವಿಪ್ರಸಾದ್ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಸುನಂದಾ ಅಬ್ಬಡ, ತೇಜಕುಮಾರಿ ಉದ್ಲಡ್ದ, ಕೀರ್ತಿಕುಮಾರಿ ಅಂಬುಲ, ಸುಲೋಚನಾ ಮಿಯೋಲ್ಪೆ, ಮೀರಾ ಕಳೆಂಜೋಡಿ, ಅಂಬಾಕ್ಷಿ ಕೂರೇಲು ಮೊದಲಾದವರಿದ್ದರು. ತಿಮ್ಮಪ್ಪ ಗೌಡ ಬೀರುಕುಡಿಕೆ ಸ್ವಾಗತಿಸಿದರು. ಚಿತ್ರಾ, ಶಶಿಕಲಾ, ರಕ್ಷಿತ್, ಪಾರ್ವತಿ ಸಹಕರಿಸಿದರು. ಕುಮಾರ್ ವಂದಿಸಿದರು.

ಅಡಕೆ ಕೊಳೆರೋಗ ಪರಿಹಾರಕ್ಕೆ ಆಗ್ರಹ

ಈಗಾಗಲೇ ಅಡಕೆ ಕೊಳೆ ರೋಗದಿಂದ ರೈತರು ಸಂಕಷ್ಟದಲ್ಲಿದ್ದು, ಈ ಬಗ್ಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಬರೆಯುವಂತೆ ಸದಸ್ಯ ವಸಂತ ಪೆರ್ಲೋಡಿ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net