ಕಲಬುರಗಿ ನೂತನ ಡಿಸಿಪಿಯಾಗಿ ಲೇಡಿ ಸಿಂಗಂ ಕನ್ನಿಕಾ ಸಿಕ್ರಿವಾಲ್ ಅಧಿಕಾರ ಸ್ವೀಕಾರ

20230907_091031
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ನೂತನ ಉಪ ಪೊಲೀಸ್ ಆಯುಕ್ತರಾಗಿ  (ಡಿಸಿಪಿ) ಲೇಡಿ ಸಿಂಗಂ ಖ್ಯಾತಿಯ ಐಪಿಎಸ್ ಅಧಿಕಾರಿ ಕನ್ನಿಕಾ ಸಿಕ್ರಿವಾಲ್  ಅವರು ಅಧಿಕಾರ ವಹಿಸಿಕೊಂಡರು.
ನಿರ್ಗಮಿತ ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರಿಂದ ಸಿಕ್ರಿವಾಲ್ ಅವರು  ಅಧಿಕಾರ ವಹಿಸಿಕೊಂಡರು.  ಕನ್ನಿಕಾ ಅವರು ಸಿಐಡಿ ಎಸ್ಪಿಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು.  ಲೇಡಿ ಸಿಂಗಂ‌ ಎಂದೇ ಹೆಸರು ಮಾಡಿದ್ದ ಕಲಬುರಗಿ ಎಸ್ಪಿ ಇಶಾ ಪಂತ್ ಅವರು ಕೇಂದ್ರ ಸೇವೆಗೆ ತೆರಳಿದ ನಂತರ ಕಲಬುರಗಿಗೆ ಮತ್ತೊಬ್ಬರು ಖಡಕ್ ಲೇಡಿ ಆಫೀಸರ್ ಬಂದಿದ್ದಾರೆ. ೨೦೧೮ ನೇ ಸಾಲಿನ ಕರ್ನಾಟಕ ಕೇಡರ್ ಪಿಎಸ್ ಅಧಿಕಾರಿಯಾಗಿದ್ದಾರೆ.

ಪೊಲೀಸ್ ಆಯುಕ್ತ ಚೇತನ ಅವರನ್ಬು ಭೇಟಿ‌ ಮಾಡಿ ಚರ್ಚೆ ನಡೆಸಿದರು. ಅಲ್ಲದೆ ಕಲಬುರಗಿ ಎಸ್ಪಿಯಾಗಿ ವರ್ಗಾವಣೆಗೊಂಡ ಶ್ರೀನಿವಾಸುಲು ಅವರೊಂದಿಗೆ ಸಮಾಲೋಚನೆ ನಡೆಸಿದರು. ನಗರದ ವಿವಿಧ ಠಾಣೆಗಳ ಪಿಐಗಳು ಹಾಗೂ ಎಸಿಪಿಗಳು ಶುಭ ಕೋರಿದರು. ಬಳಿಕ ಅವರೊಂದಿಗೆ ಔನಪಚಾರಿಕ ಸಭೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net