ಅಧ್ಯಯನದ ಜತೆಗೆ ಕ್ರೀಡೆಗಳಲ್ಲೂ ಭಾಗಿಯಾದರೆ ಉತ್ತಮ‌ ವ್ಯಕ್ತಿತ್ವ ರೂಪಗೊಳ್ಳುತ್ತದೆ

IMG-20230720-WA0148.jpg
Published on

ಬೆಳಗಾವಿ : ತಾಲೂಕಿನ ಕಂಗ್ರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ಕ್ಲಸ್ಟರ್ ಮಟ್ಟದ 2023-24 ನೇ ಸಾಲಿನ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಡಾ.ರವಿ ಪಾಟೀಲ ಉದ್ಘಾಟಿಸಿದರು.

ಬಳಿಲ ಮಾತನಾಡಿದ ಅವರು,ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ ಅದ್ಯಯನ ಹಾಗೂ ಅಂಕಗಳಿಕೆಗೆ ಸೀಮಿತರಾಗದೆ, ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಅಂದಾಗ ಮಾತ್ರ ಸದೃಡ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯ ಎಂದರು.

ಎಸ್‌ಡಿಎಂಸಿ ಅಧ್ಯಕ್ಷೆ ಪ್ರಭಾ ಶೀಗಿಹಳ್ಳಿಕರ್, ಸಿಆರ್‌ಪಿ ಶಂಕರ ಕುಲಕರ್ಣಿ, ಎನ್.ಎಫ್.ಚಕ್ರಸಾಲಿ, ರೇಖಾ ಇಂಡಿಕರ್, ಶಂಕರ ತಾರಾಪುರ, ರಮೇಶ ಪಾಟೀಲ, ನಾಗರಾಜ ಬಾಳಿಗಟ್ಟಿ,  ಎಸ್.ಎಸ್.ವಣ್ಣೂರ, ಎಸ್.ಎಸ್.ಬಾಳಿಗಟ್ಟಿ ಇದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net