

ಮಡಿಕೇರಿ:
ಕೊಡಗಿನಲ್ಲೂ ಹೆಣ್ಣು ಕರುಗಳಿಗೆ ಕಂದು ರೋಗ ಲಸಿಕೆ ಕಾರ್ಯಕ್ರಮ ಪ್ರಗತಿಯಲ್ಲಿದೆ. ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 4-8 ತಿಂಗಳು ನಡುವಿನ ಹೆಣ್ಣುಕರುಗಳಿಗೆ ಈ ಲಸಿಕೆ ಉಚಿತವಾಗಿ ಕೊಡಲಾಗುತ್ತಿದ್ದು, ಮಾರಕ ಬ್ರುಸೆಲ್ಲೋಸಿಸ್ ಕಾಯಿಲೆ ವಿರುದ್ಧ ರಕ್ಷಣೆಗಾಗಿ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಾಗಿದೆ. ಈ ರೋಗ ಮನುಷ್ಯರಿಗೂ ಹರಡುವುದರಿಂದ ಲಸಿಕೆ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.
ಶುಪಾಲಕರು ಅಥವಾ ಜಾನುವಾರು ಸಂಪರ್ಕದಲ್ಲಿರುವವರಿಗೆ ಬಹಳ ದಿನಗಳಿಂದಲೂ ಸುಸ್ತು, ರಾತ್ರಿಯಲ್ಲಿ ಜ್ವರ, ಚಳಿ, ನಡುಕ, ಕೀಲುಗಳಲ್ಲಿ ಅಸಾಧ್ಯ ನೋವು, ಬೆನ್ನು ನೋವು ಇತ್ಯಾದಿ ತೊಂದರೆಗಳಿದ್ದು, ಮಲೇರಿಯಾ, ಟೈಫಾಯ್ಡ್ ಇತ್ಯಾದಿ ಕಾಯಿಲೆಗಳಿಗೆ ಕೊಡುವ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದಿದ್ದರೆ ಇದು ಬ್ರುಸಲ್ಲೋಸಿಸ್ ಅಥವಾ ಕಂದು ರೋಗವೂ ಆಗಿರಬಹುದು. ಎಲ್ಲ ಜಾತಿಯ ಆಕಳುಗಳನ್ನು ಬಾಧಿಸುವ ಬ್ರುಸೆಲ್ಲೋಸಿಸ್ ಕಾಯಿಲೆ ಗೋಮೂತ್ರ, ಹಾಲು ಇವುಗಳಿಂದ ಮನುಷ್ಯರಿಗೆ ಹರಡಿ ಕಾಡುತ್ತದೆ. ಮಿಶ್ರತಳಿ ಮಾತ್ರವಲ್ಲದೆ ಗಿರ್ ಮತ್ತಿತರ ಜಾತಿಯ ದೇಶಿ ತಳಿಯ ಜಾನುವಾರುಗಳನ್ನೂ ಈ ಕಾಯಿಲೆ ಬಾಧಿಸುತ್ತಿದೆ.
ಕಂದು ರೋಗ ಜಾನುವಾರುಗಳಿಗೆ ಬಾರದಂತೆ ಮತ್ತು ಈ ಮೂಲಕ ಮನುಷ್ಯರಿಗೆ ಹರಡದಂತೆ ತಡೆಗಟ್ಟಲು ಹೆಣ್ಣು ಕರುಗಳಿಗೆ ಲಸಿಕೆ ಹಾಕಿಸುವುದೊಂದೇ ಉತ್ತಮ ಮಾರ್ಗ. ಹಾಗಾಗಿಯೇ ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಕೊಡಗಿನಲ್ಲೂ ಈ ತಿಂಗಳ 10ರಿಂದಲೇ ಮೂರನೇ ಸುತ್ತಿನ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಶುರುವಾಗಿದೆ. ಈ ತಿಂಗಳ 25ರ ತನಕವೂ ಲಸಿಕೆ ಪಡೆದುಕೊಳ್ಳಬಹುದಾಗಿದ್ದು, ಮಾಹಿತಿಗಾಗಿ ಸಮೀಪದ ಪಶುವೈದ್ಯ ಆಸ್ಪತ್ರೆ ಸಂಪರ್ಕಿಸಬಹುದು.
ಕಂದು ರೋಗ ಅಥವಾ ಬ್ರುಸೆಲ್ಲೋಸಿಸ್ ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದೆ. ಈ ಬ್ಯಾಕ್ಟೀರಿಯಾಗಳು ಜಾನುವಾರುಗಳಲ್ಲಿ ಜ್ವರ, ಗರ್ಭಪಾತ, ಗರ್ಭಧಾರಣೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಮನುಷ್ಯರಿಗೆ ಕಾಣಿಸಿಕೊಳ್ಳುವ ಪ್ರಮುಖ ಪ್ರಾಣಿಜನ್ಯ ರೋಗವೂ ಆಗಿದ್ದು, ಇದಕ್ಕೆ ಚಿಕಿತ್ಸೆ ದುಬಾರಿ ಆಗಿರುತ್ತದೆ. ಜತೆಗೆ ಪಶುಪಾಲಕರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟವನ್ನೂ ಉಂಟು ಮಾಡುತ್ತದೆ. ಹಾಗಾಗಿ 4-8 ತಿಂಗಳು ನಡುವಿನ ಹೆಣ್ಣುಕರುಗಳಿಗೆ ಲಸಿಕೆ ಕೊಡುವ ಮೂಲಕ ಈ ಕಾಯಿಲೆ ನಿಯಂತ್ರಿಸಬಹುದಾಗಿದೆ.
ಜಾನುವಾರುಗಳ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಲಸಿಕೆ ಹಾಕಿಸಿಕೊಂಡರೆ ಸಾಕಾಗುತ್ತದೆ.
ಬ್ರುಸೆಲ್ಲಾ ಅಬೊರ್ಟಸ್ ಪ್ರಬೇಧದ 19 ಜೀವಂತ ರೋಗಾಣುವನ್ನು ಹೊಂದಿದ ಲಸಿಕೆಯನ್ನು 4-8 ತಿಂಗಳಿನ ವಯಸ್ಸಿನ ಕರುಗಳಿಗೆ ಕೊಟ್ಟರೆ ರೋಗವನ್ನು ಪರಿಣಾಮಕಾರಿಯಗಿ ತಡೆಗಟ್ಟಲು ಸಾಧ್ಯವಿದೆ. ಹಸು, ಎಮ್ಮೆ, ಆಡು, ಕುರಿ, ಹಂದಿ, ನಾಯಿ, ಒಂಟೆ ಹಾಗೂ ಕುದುರೆಗಳಲ್ಲಿ ಬ್ರೂಸೆಲ್ಲಾ ಗುಂಪಿಗೆ ಸೇರಿದ ವಿವಿಧ ರೀತಿಯ ಬ್ಯಾಕ್ಟಿçÃರಿಯಾಗಳಿಂದ ಕಂದು ರೋಗ ಕಂಡುಬರುತ್ತದೆ. ಪಶು ವೈದ್ಯರು, ಹಸು, ಕುರಿ, ಆಡು ಮತ್ತಿತರ ಪ್ರಾಣಿಗಳನ್ನು ಸಾಕುವವರು ಹಾಗೂ ಮಾಂಸ ಮಾರಾಟಗಾರರು ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬರುವುದರಿಂದ ಅವರಲ್ಲೂ ಈ ರೋಗ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ.
ಆಹಾರ ಅಥವಾ ನೀರು ಸೇವನೆ ಸಂದರ್ಭ, ಕಣ್ಣು ಅಥವಾ ಚರ್ಮದ ಮುಖಾಂತರ, ಕೃತಕ ಗರ್ಭಧಾರಣೆ ಸಂದರ್ಭ ಸೋಂಕಿಯ ವೀರ್ಯಗಳ ಉಪಯೋಗ, ರೋಗಗ್ರಸ್ಥ ಹೋರಿಗಳಿಂದ ತಳಿಸಂವರ್ಧನೆ ಸಂದರ್ಭ ಜಾನುವಾರುಗಳಿಗೆ ಈ ಕಾಯಿಲೆ ಹರಡಬಹುದು. ರೋಗಕ್ಕೆ ತುತ್ತಾದ ಜಾನುವಾರುಗಳ ಗರ್ಭಸ್ರಾವ ಅಥವಾ ಮಾಸುಗಳಲ್ಲಿ ರೋಗಾಣುಗಳು ಕಂಡು ಬರುತ್ತದೆ. ಇದರಿಂದಾಗಿ ಇಂಥ ಜಾನುವಾರುಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡವರು ಮತ್ತು ಹೈನುಗಾರರು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ.
ಗರ್ಭಪಾತಕ್ಕಿಂತ ಮೊದಲು ಜನನೇಂದ್ರೀಯದಿAದ ಬಿಳಿಸ್ರಾವ, ಗರ್ಭ ಧರಿಸಿದ ಎಮ್ಮೆ, ಹಸುಗಳಲ್ಲಿ ಕೊನೆಯ ತ್ರೆöÊಮಾಸಿಕದಲ್ಲಿ ಗರ್ಭಪಾತ, ಮಾಸು ಹೊರಬೀಳದೇ ಗರ್ಭದಲ್ಲೇ ಉಳಿದು ಗರ್ಭಾಶಯ ಹಾಳುಗೆಡುವುದು, ಕೀಲುಗಳಲ್ಲಿ ನೀರು ತುಂಬಿಕೊAಡು ಊತ ಕಂಡುಬರುವುದು, ಹೋರಿಗಳಲ್ಲಿ ವೃಷಣ ಬಾತುಕೊಳ್ಳುವುದು ಇವು ಜಾನುವಾರುಗಳಲ್ಲಿ ಕಂದು ರೋಗ ಅಥವಾ ಬ್ರುಸೆಲ್ಲೋಸಿಸ್ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ.
ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಕೊಡಲಾಗುತ್ತಿರುವ ಲಸಿಕೆಯ ಪ್ರಯೋಜನವನ್ನು ಪಶುಪಾಲಕರು ಪಡೆದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಆಗಬಹುದಾಗ ನಷ್ಟದಿಂದ ಪಾರಾಗಬಹುದಾಗಿದೆ. ಆದರೆ ಈ ಲಸಿಕೆಯನ್ನು ಗಂಡು ಕರುಗಳಿಗೆ ಹಾಕಿಸಬಾರದು. ಗರ್ಭ ಧರಿಸಿದ ಹಸುಗಳಿಗೆ ಹಾಕಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಲಸಿಕೆಯ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೂ ಸೋಂಕು ಉಂಟಾಗುವ ಸಾಧ್ಯತೆ ಇರುವುದರಿಂದ ಲಸಿಕೆ ಹಾಕುವವರೂ ಸೂಕ್ತ ಎಚ್ಚರಿಕೆ ವಹಿಸಬೇಕಾಗುತ್ತದೆ.
ರೋಗದ ನಿಯಂತ್ರಣ ಹೇಗೆ ?
ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಜಾನುವಾರುಗಳಲ್ಲಿ ಕಂದು ರೋಗ ಅಥವಾ ಬ್ರುಸೆಲ್ಲೋಸಿಸ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗಗ್ರಸ್ಥ ಹೋರಿಗಳಿಂದ ಕಾಯಿಲೆ ಹರಡುವುದನ್ನು ತಡೆಯಲು ಹಸು ಮತ್ತು ಎಮ್ಮೆಗಳಿಗೆ ಸೋಂಕು ರಹಿತ ವೀರ್ಯ ಬಳಸಿ ಕೃತಕ ಗರ್ಭðಧಾರಣೆ ಮಾಡಿಸಬೇಕು. 4-8 ತಿಂಗಳು ನಡುವಿನ ಹಸು ಅಥವಾ ಎಮ್ಮೆ ಕರುಗಳಿಗೆ ಜೀವಿತದಲ್ಲಿ ಒಮ್ಮೆ ಲಸಿಕೆ ಹಾಕಿಸಬೇಕು. ಗರ್ಭಪಾತವಾದ ಭ್ರೂಣ, ಮಾಂಸ, ಸ್ರಾವ ಇತ್ಯಾದಿಗಳನ್ನು ದೂರ ತೆಗೆದುಕೊಂಡು ಹೋಗಿ ಆಳವಾಗಿ ಹೂಳಬೇಕು ಅಥವಾ ಸುಟ್ಟುಹಾಕಬೇಕು. ಸತ್ತ ರಾಸುಗಳನ್ನು ಕಟುಕರಿಗೆ ಕೊಡದೇ ಆಳವಾಗಿ ಹೂಳಬೇಕು. ಕೊಟ್ಟಿಗೆ ಮತ್ತು ಗರ್ಭಪಾತವಾದ ಸ್ಥಳವನ್ನು ಸೋಂಕುನಾಶಕ ದ್ರಾವಣದಿಂದ ಶುಚಿಗೊಳಿಸಬೇಕು. ರೋಗಮುಕ್ತವಾಗಿರುವ ಹಿಂಡಿನಿAದಲೇ ಹಸುಗಳನ್ನು ಖರೀದಿ ಮಾಡಬೇಕು. ಹೊಸದಾಗಿ ಖರೀದಿಸಿದ ಜಾನುವಾರುಗಳನ್ನು ಕನಿಷ್ಠ 30 ದಿನಗಳ ಕಾಲ ಉಳಿದ ಜಾನುವಾರುಗಳಿಂದ ದೂರ ಇಡಬೇಕು.
ಮನುಷ್ಯರಲ್ಲಿ ರೋಗದ ಆತಂಕ
ರೋಗಪೀಡಿತ ರಾಸುವಿನಿಂದ ಹಿಂಡಿದ ಹಸಿ ಹಾಲು ಕುಡಿಯುವುದರಿಂದ, ಗರ್ಭಕೋಶದ ಸ್ರವಿಕೆಯ ಸಂಪರ್ಕಕ್ಕೆ ಬರುವುದರಿಂದ ಮನುಷ್ಯರಿಗೆ ಈ ರೋಗ ಹರಡುವ ಸಾಧ್ಯತೆ ಇರುತ್ತದೆ. ಗಾಯಗಳ ಮೂಲವೂ ರೋಗಾಣು ಮನುಷ್ಯದ ದೇಹವನ್ನು ಸುಲಭವಾಗಿ ಪ್ರವೇಶಿಸುತ್ತದೆ. ಸೋಂಕಿತ ತಾಯಿಯ ಎದೆಹಾಲು ಕುಡಿಯುವುದರಿಂದಲೂ ಮಗುವಿಗೆ ಸೋಂಕು ಹರಡುತ್ತದೆ. ಕಂದು ರೋಗ ಸೋಂಕಿತರಲ್ಲಿ ತಲೆ ನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಏರು, ಪೇರಾಗುವ ಜ್ವರ, ಕೀಲುಗಳಲ್ಲಿ ನೋವು, ಮಂಡಿ ನೋವು, ಕತ್ತಿನ ಸ್ನಾಯುಗಳಲ್ಲಿ ನೋವು ಬರುತ್ತದೆ. ವಾಸನೆಯಿಂದ ಕೂಡಿದ ಬೆವರು, ಮಂಕಾದ ಕಣ್ಣುಗಳು, ಅಶಕ್ತತೆಯ ಲಕ್ಷಣಗಳು ಕಂಡುಬರುತ್ತದೆ. ಗಂಡಸರಲ್ಲಿ ರೋಗ ಉಲ್ಬಣಗೊಂಡಾಗ ನಪುಂಸಕತೆಯೂ ಉಂಟಾಗಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಒಳಗಾದರೆ ರೋಗ ವಾಸಿ ಆಗುತ್ತದೆ.
ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ 4-8 ತಿಂಗಳು ನಡುವಿನ ಹೆಣ್ಣುಕರುಗಳಿಗೆ ಈ ಲಸಿಕೆ ಉಚಿತವಾಗಿ ಕೊಡಲಾಗುತ್ತಿದೆ. ಕೊಡಗಿನಲ್ಲಿ ಈ ತಿಂಗಳ 10ರಿಂದಲೇ ಮೂರನೇ ಸುತ್ತಿನ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಶುರುವಾಗಿದೆ. ಈ ತಿಂಗಳ 25ರ ತನಕವೂ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಪಶುಪಾಲಕರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ. ಈ ಲಸಿಕೆ ಹಾಕಿಸುವುದರಿಂದ ಜಾನುವಾರುಗಳಲ್ಲಿ ಗರ್ಭಪಾತ ಆಗುವುದನ್ನು ತಡೆಗಟ್ಟಬಹುದು. ಮತ್ತೆ ಮತ್ತೆ ಲಸಿಕೆ ಹಾಕಿಸುವ ಅಗತ್ಯವಿಲ್ಲ. 3-5 ವರ್ಷಗಳ ತನಕ ಹಿಂಡಿನಲ್ಲಿ ರೋಗ ಪ್ರತಿಬಂಧಕ ಶಕ್ತಿ ಇರುತ್ತದೆ.
ಲಿಂಗರಾಜ ದೊಡ್ಡಮನಿ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು