ಬಸ್ತೀಪುರದಲ್ಲಿ ಕಂಡಾಯ ಮಹೋತ್ಸವ

19-kgl-3
Published on

ಕೊಳ್ಳೇಗಾಲ : ಪಟ್ಟಣದ ಬಸ್ತೀಪುರ ಗ್ರಾಮದಲ್ಲಿ ಶನಿವಾರ ಕಾರ್ತಿಕ ಮಾಸದ ಅಂಗವಾಗಿ ಶ್ರೀ ಶನೇಶ್ವರಸ್ವಾಮಿ ಛಾಯದೇವಿ ಸಮೇತ ಕುರುಬನಕಟ್ಟೆ ಕಂಡಾಯ ಉತ್ಸವ ವಿಜೃಂಭಣೆಯಿಂದ ನಡೆಯಿತು. ಶನೇಶ್ವರ ದೇವಾಲಯದ ಪ್ರಧಾನ ಅರ್ಚಕ ಮಹದೇವಪ್ಪ ನೇತೃತ್ವದಲ್ಲಿ ಕಂಡಾಯಗಳ ಮೆರವಣಿಗೆ ನಡೆದಿದ್ದು. ದೇವಾಲಯದಲ್ಲಿರುವ ಶನೇಶ್ವರಸ್ವಾಮಿ, ಛಾಯದೇವಿ ಮೂರ್ತಿಗೆ ಹೂವಿನ ಅಲಂಕಾರ ನಡೆಸಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಜೆ.ಸಿ ಕಿರಣ್, ಉಪವಿಭಾಗಧಿಕಾರಿ ಮಹೇಶ್ ಇನ್ನಿತರರು ದೇವಾಲಯಕ್ಕೆ ಭೇಟಿ ನೀಡಿದ್ದರು. ರಾತ್ರಿ ಹರಿಕಥೆ ನಂತರ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ನಂತರ, ಮೆರವಣಿಗೆ ಮೂಲಕ ಮನೆ ಬಾಗಿಲಿಗೆ ಬಂದ ಕಂಡಾಯಗಳಿಗೆ ಶ್ರದ್ಧಾ-ಭಕ್ತಿಯಿಂದ ಭಕ್ತರು ಪೂಜೆ ಸಲ್ಲಿಸಿದರು. ಅರ್ಚಕ ಹರೀಶ್ ಹಾಗು ಗ್ರಾಮದ ಯಜಮಾನರು ಮತ್ತು ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net