

ಅಕ್ಕಿಆಲೂರ: ಪುದಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಮೀಪದ ಕಂಚಿನೆಗಳೂರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಗಿರೀಶ ದೊಡ್ಡಮನಿ ತೃತೀಯ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಭಾರತದ 6 ರಾಜ್ಯಗಳ ಒಟ್ಟು 58 ಶಿಕ್ಷಕರು ಪಾಲ್ಗೊಂಡಿದ್ದರು.
ಈ ಪೈಕಿ ಕರ್ನಾಟಕದಿಂದ ಭಾಗವಹಿಸಿದ್ದ 9 ಶಿಕ್ಷಕರ ಪೈಕಿ ಭೌತ ವಿಜ್ಞಾನದ ಪರಿಕಲ್ಪನೆಗಳ ಕಾರ್ಯನಿರತ ಮಾದರಿಯನ್ನು ಗಿರೀಶ ದೊಡ್ಡಮನಿ ತಯಾರಿಸಿ ತೃತೀಯ ಸ್ಥಾನ ಪಡೆದ್ದಿದ್ದಾರೆ.