

ಹರಪನಹಳ್ಳಿ: ತಾಲೂಕಿನ ಕಂಚಿಕೆರೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸಿ.ಶಾಂತಾದೇವಿ, ಮತ್ತಿಹಳ್ಳಿ ಸುನೀತಾ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಶಾಂತಾದೇವಿ ಚಿನ್ನಪ್ಪ ಹಾಗೂ ಅಶೋಕ್ ನಾಮಪತ್ರ ಸಲ್ಲಿಸಿದ್ದರು. ಒಟ್ಟು 24 ಸದಸ್ಯರ ಪೈಕಿ ಶಾಂತದೇವಿ ಚಿನ್ನಪ್ಪಗೆ 12 ಹಾಗೂ ಅಶೋಕ್ 11 ಮತ ಪಡೆದರೆ, ಒಂದು ತಿರಸ್ಕೃತಗೊಂಡಿದ್ದರಿಂದ ಶಾಂತಾದೇವಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ವಿ.ಗಿರೀಶ್ ಘೋಷಿಸಿದರು.
ನ.2ರಂದು ನಿಗದಿಕೊಂಡಿದ್ದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತಿಹಳ್ಳಿ ಸುನೀತಾ ಸಿದ್ದಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಅಧ್ಯಕ್ಷ ಸ್ಥಾನಕ್ಕೆ ಗೊಂದಲವುಂಟಾಗಿದ್ದರಿಂದ ನ.9ರಂದು ಚುನಾವಣೆ ಮುಂದೂಡಲಾಗಿತ್ತು.
ವೃತ್ತ ನಿರೀಕ್ಷಕ ನಾಗರಾಜ್ ಕಮ್ಮಾರ್, ಪಿಎಸ್‌ಐ ಎ.ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ಪೋಲಿಸ್ ಬಂದೋಬಸ್ತ್ ಒದಗಿಸಿದ್ದರು. ಪ್ರಮುಖರಾದ ರೆಡ್ಡಿ ಶಾಂತಕುಮಾರ್, ಕೊಟ್ರಯ್ಯ, ಬಿದ್ರಿ ಸುನೀಲ್ ಕುಮಾರ್, ರಾಜಣ್ಣ, ಕೆ.ಕೆಂಚಪ್ಪ ಇತರರಿದ್ದರು.