ಕಟೀಲಿಗೆ ಕಂಚಿ ಸ್ವಾಮೀಜಿ ಭೇಟಿ

New Project (24)
Published on

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಶ್ರೀ ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಶಂಕರಾಚಾರ್ಯ ಮಹಾಸ್ವಾಮೀಜಿ ಇತ್ತೀಚೆಗೆ ಭೇಟಿ ನೀಡಿದರು.

ಕಟೀಲಿನ ಆನೆ ಮಹಾಲಕ್ಷೀ ಸ್ವಾಮೀಜಿಯನ್ನು ವಿಶೇಷವಾಗಿ ಸ್ವಾಗತಿಸಿತು.

ನಂತರ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಸಂಬಂಧಗಳು ಗಟ್ಟಿಯಾಗಬೇಕು. ವಿಶ್ವಾಸ ಸ್ನೇಹ ಸಂಬಂಧಗಳು ಚೆನ್ನಾಗಿರಬೇಕು. ಮಕ್ಕಳಿಗೆ ಸಂಸ್ಕಾರ ತಿಳಿಸುವ ಕೆಲಸ ಪ್ರತಿ ಮನೆಯಲ್ಲೂ ಆಗಬೇಕು. ಶಾಸ್ತ್ರ ಆಚಾರ ಧರ್ಮದ ಬಗ್ಗೆ ಹೇಳಬೇಕು ಎಂದರು

ಭಕ್ತರು ಫಲವಸ್ತುಗಳನ್ನು ಸ್ವಾಮೀಜಿಗೆ ಸಮರ್ಪಿಸಿ, ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net