

ಸುಳ್ಯ: ಶ್ರೀ ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಅರಂಬೂರಿನ ಭಾರದ್ವಾಜಾಶ್ರಮಕ್ಕೆ ಸೋಮವಾರ ಬೆಳಗ್ಗೆ ಆಗಮಿಸಿದರು. ವೇದ ವಿದ್ಯಾಲಯದ ಬಳಗದವರು ಸ್ವಾಮೀಜಿಯನ್ನು ಭವ್ಯವಾಗಿ ಸ್ವಾಗತಿಸಿದರು. ಬಳಿಕ ಸ್ವಾಮೀಜಿ ಆಶೀರ್ವಚನವಿತ್ತರು. ಆಶ್ರಮದ ವತಿಯಿಂದ ಪಾದಪೂಜೆ ನೆರವೇರಿಸಲಾಯಿತು. ಹಿರಿಯರಾದ ಗಿರೀಶ್ ಭಾರಧ್ವಾಜ್ ಹಾಗೂ ಭಾರಧ್ವಾಜ್ ಸಹೋದರರು ಮತ್ತು ಸ್ಥಳೀಯ ಭಕ್ತರು ಉಪಸ್ಥಿತರಿದ್ದರು.