

ಹೆಬ್ರಿ: ಹೆಬ್ರಿ ತಾಲೂಕಿನ ಕಂಚರಕಾಳು ಎಂಬಲ್ಲಿ ಸೇತುವೆ ನಿರ್ವಾಣ ಕಾಮಗಾರಿ ಹಿನ್ನೆಲೆಯಲ್ಲಿ ಬದಲಿ ಮಾರ್ಗ ನಿರ್ಮಿಸಲಾಗಿದ್ದು, ಭಾರಿ ಮಳೆಯಿಂದ ಬದಲಿ ರಸ್ತೆಯೂ ಮುಳುಗಡೆಯಾಗಿದೆ. ಇದರಿಂದ ಸ್ಥಳೀಯರಿಗೆ ಮತ್ತೆ ಸಮಸ್ಯೆ ಎದುರಾಗಿದೆ. ಹೋರಾಟಗಳಿಂದ ಸಂಚಲನ ಮೂಡಿಸಿದ್ದ ಈ ಸೇತುವೆ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು. ಅಲ್ಲದೇ ಸ್ಥಳೀಯರಿಗೆ ಓಡಾಡಲು ಅವಕಾಶ ವಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಟನೆ ನಡೆದ ಒಂದು ದಿನ ವಾತ್ರ ಸ್ಥಳೀಯರಿಗೆ ಓಡಾಡಲು ಅವಕಾಶ ದೊರಕಿತು. ಬುಧವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಬದಲಿ ರಸ್ತೆಯೂ ಮುಳುಗಡೆಯಾಗಿ ವಾಹನಗಳು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಅಪರ ಜಿಲ್ಲಾಧಿಕಾರಿ ಭೇಟಿ: ರಸ್ತೆ ಬೇಡಿಕೆ ಕುರಿತು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಬಂದಿದ್ದರಿಂದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ವಿಜಯವಾಣಿಯೊಂದಿಗೆ ವಾತನಾಡಿ, ಭಾರಿ ಮಳೆಯಿಂದ ತಾತ್ಕಾಲಿಕ ರಸ್ತೆ ಮೇಲೆ ನೀರು ಹರಿದು ವಾಹನಗಳು ಓಡಾಡದ ಪರಿಸ್ಥಿತಿ ನಿರ್ವಾಣ ಆಗಿದೆ. ಸದ್ಯಕ್ಕೆ ಜನರು ಬದಲಿ ವಾರ್ಗ ಬಳಸಬೇಕು. ಸ್ಥಳೀಯ ಜನರಿಗೆ ನೆರವಾಗಲು ಮಳೆ ಕಡಿಮೆಯಾದ ನಂತರ ಈ ರಸ್ತೆ ಬಳಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಸೇತುವೆ ಕಾಮಗಾರಿಯಲ್ಲಿ ಯಾವುದೇ ಲೋಪಗಳು ಉಂಟಾಗದಂತೆ ಸಮರ್ಪಕವಾಗಿ ನಡೆಸಲು ಆದೇಶಿಸಿದರು. ತಹಸೀಲ್ದಾರ್ ಎಸ್.ಎ.ಪ್ರಸಾದ್, ಕುಚ್ಚೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಸದಸ್ಯ ಮಹೇಶ್ ಶೆಟ್ಟಿ ಕಾನ್ಬೆಟ್ಟು, ಸವಾಜ ಸೇವಕ ರಾವೇಂದ್ರ ನಾಯ್ಕ, ಗುತ್ತಿಗೆದಾರ ಗಣೇಶ್ ಕುಲಾಲ್ ಇದ್ದರು.
ಗುರುವಾರ ಸುರಿದ ಮಳೆಗೆ ಭಾರಿ ಪ್ರವಾಣದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇನ್ನೆರಡು ದಿನ ಹೀಗೆ ಮಳೆ ಸುರಿದರೆ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆ ಸಂಪೂರ್ಣ ಕೊಚ್ಚಿ ಹೋಗುವ ಭೀತಿ ಇದೆ. ಮಳೆ ಕಡಿಮೆಯಾದಲ್ಲಿ 15 ದಿನದೊಳಗಾಗಿ ಬ್ರಿಡ್ಜ್ ಕೆಲಸ ಮುಗಿಸಿ ಸಾರ್ವಜನಿಕರಿಗೆ ಸಂಚರಿಸಲು ಅವಕಾಶ ವಾಡಿಕೊಡುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.