

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು `ನಾಡೋಜ ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ' ದತ್ತಿ ಅಂಗವಾಗಿ ಕನ್ನಡ ಯುವ ಲೇಖಕರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ವಿಜೇತರಿಗೆ ಶನಿವಾರ ಬಹುಮಾನ ವಿತರಣೆ ಮಾಡಲಾಯಿತು.
ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಹಾವೇರಿಯ ಮಧು ಕಾರಗಿ ಪ್ರಥಮ, ದಕ್ಷಿಣ ಕನ್ನಡದ ಜಯಶ್ರೀ ಇಡ್ಕಿದು ದ್ವಿತೀಯ, ರಾಯಚೂರಿನ ಸಂಜೀವ ಜಗ್ಲಿ ಹಾಗೂ ಶಿರಸಿಯ ಚಂದನಾ ಡಿ. ನಾಯ್ಕ ತೃತಿಯ ಬಹುಮಾನ ಪಡೆದರು.
ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ಶಿವಮೊಗ್ಗದ ದಿವ್ಯಶ್ರೀ ಪ್ರಥಮ, ಬೆಳಗಾವಿಯ ರಂಜಿತಾ ದ್ವಿತೀಯ, ಕೊಪ್ಪಳದ ವಿದ್ಯಾಶ್ರೀ ಹಡಪದ ಹಾಗೂ ಹಾವೇರಿಯ ಡಾ. ಕಾವ್ಯಾ ಕೆ.ಎಸ್. ತೃತಿಯ ಬಹುಮಾನ ಪಡೆದರು.
ಚೆನ್ನವೀರ ಕಣವಿ ಜನ್ಮದಿನಾಚರಣೆ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರಿಗೆ ಸಾಹಿತಿ ಡಾ. ರಹಮತ್ ತರೀಕೆರೆ ಬಹುಮಾನ ನೀಡಿ ಗೌರವಿಸಿದರು.
ಡಾ. ಜಿ.ಎಂ. ಹೆಗಡೆ, ಶಿವಾನಂದ ಕಣವಿ, ಪ್ರಿಯದರ್ಶಿ ಕಣವಿ, ಚಂದ್ರಮೌಳಿ ಕಣವಿ, ಶಂಕರ ಹಲಗತ್ತಿ, ಪ್ರಜ್ಞಾ ಮತ್ತಿಹಳ್ಳಿ, ಡಾ. ಧನವಂತ ಹಾಜವಗೋಳ, ಬಸವಪ್ರಭು ಹೊಸಕೇರಿ, ಇತರರಿದ್ದರು.