

ದೊಡ್ಡಬೆಳವಂಗಲ: ತಾಯಿ ಹಾಲು ಕುಡಿಸುವುದರಿಂದ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ಇ. ರವಿಕುಮಾರ್ ಹೇಳಿದರು.
ಮಧುರೆ ಹೋಬಳಿಯ ಕನಸವಾಡಿ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ತಾಯಿ ಹಾಲು ನೀಡುವುದರಿಂದ ಸ್ತನ ಕ್ಯಾನ್ಸರ್ ಬರುವುದಿಲ್ಲ. ಮಕ್ಕಳ ಜತೆಗೆ ತಾಯಿಯೂ ಆರೋಗ್ಯವಂತರಾಗಿರುತ್ತಾರೆ ಎಂದರು. ಹಿರಿಯ ಮೇಲ್ವಿಚಾರಕಿ ಡಾ.ಜಿ.ಸಿ.ತೇಜಸ್ವಿನಿ ಮಾತನಾಡಿ, ಶಿಶು ಮರಣ ತಪ್ಪಿಸಲು ತಾಯಿ ಹಾಲು ಕುಡಿಸಬೇಕು ಎಂದು ತಿಳಿಸಿದರು. ಡಾ.ಕುಸುಮಾ ಮಾತನಾಡಿ, ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ. ಹಾಗಾಗಿ ಮಕ್ಕಳಿಗೆ ತಾಯಿ ಹಾಲು ಮುಖ್ಯ ಎಂದರು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಗಾಯತ್ರಿ, ಆಶಾ ಕಾರ್ಯಕರ್ತೆ ಜಯಲಕ್ಷ್ಮಮ್ಮ ಇತರರು ಇದ್ದರು.