ಕಣಸಗಿರಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ವಿರೋಧ

Garbage problem
Published on

ಕಾರವಾರ: ಚಿತ್ತಾಕುಲಾ ಗ್ರಾಮಕ್ಕೆ ಕಸದ ಕಂಠಕ ಎದುರಾಗಿದೆ. ಗ್ರಾಮ ಪಂಚಾಯಿತಿ ಪಕ್ಕದಲ್ಲೇ ಇದ್ದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗದ ಕಾರಣ ಹೈಸ್ಕೂಲ್ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ನಂತರ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಎಲ್ಲ ಘಟನೆ ನಡೆದ ಬಳಿಕ ಗ್ರಾಪಂ ಕಣಸಗಿರಿಯ ಬಂದರುವಾಡ ಸಮೀಪ ತ್ಯಾಜ್ಯ ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಯೋಜಿಸಿದೆ. ಗ್ರಾಮಸ್ಥರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೆ ಕಣಸಗಿರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡದಂತೆ 200 ಕ್ಕೂ ಅಽಕ ಜನರು ಆಗಮಿಸಿ ತಹಸೀಲ್ದಾರ್ ಅವರಿಗೆ ತಮ್ಮ ಆಕ್ಷೇಪಣೆ ಸಲ್ಲಿಸಿದ್ದಾರೆ. ಊರು ಸುತ್ತಲೂ ಕಾಡಿನಿಂದ ಕೂಗಿದೆ. ಜಿಂಕೆ, ಕಡವೆ, ನವಿಲು ಮುಂತಾದ ಕಾಡು ಪ್ರಾಣಿಗಳು ಬಂದು ಹೋಗುತ್ತವೆ. ಅವುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.

ತ್ಯಾಜ್ಯ ವಿಲೇವಾರಿ ಘಟಕದಿಂದ ಹೊರ ಹೊಮ್ಮುವ ವಿಪರೀತ ವಾಸನೆಯಿಂದ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಇಲ್ಲಿ ತ್ಯಾಜ್ಯ ಸಂಗ್ರಹಣೆ ಮಾಡಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಆನಂದ ನಾಯ್ಕ, ದಿಯಾ ನಾಯ್ಕ, ಪ್ರಶಾಂತ ಬಿ.ಶಿಂಧೋಳಕರ್, ಸಂದೀಪ ಉತ್ತಮ ರಾಣೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net