ಮಣಿಪಾಲದಲ್ಲಿ ಆ.15ರಂದು ಕೆನರಾ ಮೆರಾಥಾನ್​

Canara-1
Published on

ಸೀನಿಯರ್​ ಮೆನೇಜರ್​ ಸಚಿನ್​ ಶೆಟ್ಟಿ ಮಾಹಿತಿ | ಮಹಿಳಾ ಸಬಲೀಕರಣಕ್ಕಾಗಿ ಓಟ

ವಿಜಯವಾಣಿ ಸುದ್ದಿಜಾಲ ಉಡುಪಿ
ಕೆನರಾ ಬ್ಯಾಂಕ್​ ಮಣಿಪಾಲ ಶಾಖೆ ವತಿಯಿಂದ ಆ.15ರಂದು 3ನೇ ಆವೃತ್ತಿಯ ಕೆನರಾ ಮೆರಾಥಾನ್​ ಆಯೋಜಿಸಲಾಗಿದ್ದು, ಈ ಬಾರಿ ಮಹಿಳಾ ಸಬಲೀಕರಣ ಶೀರ್ಷಿಕೆಯಡಿ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸೀನಿಯರ್​ ಮೆನೇಜರ್​ ಸಚಿನ್​ ಶೆಟ್ಟಿ ಮಾಹಿತಿ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 5:30ಕ್ಕೆ ಮೆರಾಥಾನ್​ಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನಾಲ್ಕು ವಿಭಾಗ

3ಕೆ, 5ಕೆ, 10ಕೆ ಹಾಗೂ 21ಕೆ ವಿಭಾಗವಾಗಿ ವಿಂಗಡಿಸಿದ್ದು, ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. 5 ಲಕ್ಷ ರೂ. ಮೊತ್ತದ ಬಹುಮಾನ ಇದ್ದು, ಎರಡೂ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಮೆರಾಥಾನ್​ನಲ್ಲಿ ಪಾಲ್ಗೊಂಡ ಎಲ್ಲರಿಗೂ ಕೆನರಾ ಬ್ಯಾಂಕ್​ನ ಬ್ಯಾಗ್​, ಟಿ-ಶರ್ಟ್​ ಹಾಗೂ ಪದಕ ನೀಡಲಾಗುವುದು ಎಂದರು.

ಓಟದ ಮಾರ್ಗ

ಮಣಿಪಾಲದ ಕೆನರಾ ಬ್ಯಾಂಕ್​ ಸರ್ಕಲ್​ನಿಂದ ಅಲೆವೂರು ಮಾರ್ಗದಲ್ಲಿ ಶಾಂತಿನಗರದ ಮೂಲಕ ಟ್ಯಾಪ್​ ಮಿ ಸ್ಕೂಲ್​ ಮುಂಭಾಗದ ರಸ್ತೆಯಲ್ಲಿ ಮೆರಾಥಾನ್​ ಸಾಗಲಿದೆ. ನೋಂದಣಿ ಹಾಗೂ ಮಾಹಿತಿಗಾಗಿ ಮೊ.ಸಂ. 9108242331, 7838911626 ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸೀನಿಯರ್​ ಮೆನೇಜರ್​ಗಳಾದ ವಿಶಾಲ್​ ಸಿಂಗ್​, ಸೂರಜ್​ ಉಪ್ಪೂರು, ಮೆನೇಜರ್​ ದುರ್ಗಾಪ್ರಸಾದ, ನಿವೃತ್ತ ಸಿಬ್ಬಂದಿ ನರಸಿಂಹಮೂರ್ತಿ ಇದ್ದರು.

ಉದ್ಘಾಟನಾ ಕಾರ್ಯಕ್ರಮ

ಬೆಳಗ್ಗೆ 5:30ಕ್ಕೆ 21ಕೆ, 6 ಗಂಟೆಗೆ 10ಕೆ, 6:30ಕ್ಕೆ 5ಕೆ, 7 ಗಂಟೆಗೆ 3ಕೆ ಮೆರಾಥಾನ್​ ಉದ್ಘಾಟನೆ ನಡೆಯಲಿದೆ. ಮಾಹೆಯ ಸಹಕುಲಾಧಿಪತಿ ಡಾ.ಎಚ್​.ಎಸ್​. ಬಲ್ಲಾಳ್​, ಸಂಸದ ಕೋಟ ಶ್ರೀನಿವಾಸ್​ ಪೂಜಾರಿ, ಶಾಸಕ ಯಶ್​ಪಾಲ್​ ಸುವರ್ಣ ಹಾಗೂ ಒಲಿಂಪಿಕ್​ನಲ್ಲಿ ಬಂಗಾರದ ಪದಕ ಗಳಿಸಿದ ಕ್ರೀಡಾಪಟು ಅಕ್ಷತಾ ಪೂಜಾರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net