ತುಂಬಿ ಹರಿದ ಹಳ್ಳ ಕೊಳ್ಳಗಳು

rain
ಕನಕಗಿರಿ ತಾಲೂಕಿನ ಗುಡದೂರು ಹಳ್ಳ ತುಂಬಿ ಹರಿಯುತ್ತಿರುವುದು.
Published on

ಕನಕಗಿರಿ: ಭಾರಿ ಗುಡುಗು ಸಿಡಿಲು ಸಹಿತ ಮಂಗಳವಾರ ತಾಲೂಕಿನಾದ್ಯಂತ ಸುರಿದ ಮಳೆಗೆ ಭೂಮಿ ತಂಪಾಗಿದ್ದು, ಹಲವು ಕಡೆಗಳಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ.

ತಾಲೂಕಿನ ಗುಡದೂರು, ಸಿರವಾರ, ಗೋಡಿನಾಳ ಗುಡ್ಡದ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕರಡೋಣ ಗ್ರಾಪಂ ವ್ಯಾಪ್ತಿಯ ಗುಡದೂರು ಪಕ್ಕದ ಹಳ್ಳ ತುಂಬಿ ಹರಿದಿದೆ.

ಚೆಕ್‌ಡ್ಯಾಂ, ಕೃಷಿ ಹೊಂಡಗಳು ತುಂಬಿ ಅಂತರ್ಜಲ ವೃದ್ಧಿಯಾಗಲಿದೆ. ಬೇಸಿಗೆ ದಿನಗಳಲ್ಲಿ ಅನೇಕ ಕಡೆಗಳಲ್ಲಿ ಕುಸಿತ ಕಂಡಿದ್ದ ಕೊಳವೆಬಾವಿಗಳು ಇದೀಗ ಚೇತರಿಸಿಕೊಳ್ಳುತ್ತಿವೆ ಎಂದು ಗ್ರಾಮದ ರೈತ ಕನಕಪ್ಪ ಮಂದಲಾರ ತಿಳಿಸಿದರು.

ಇದೇ ರೀತಿ ಮಳೆಯಾದಲ್ಲಿ ಒಡ್ಡು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲಲಿದೆ. ನಾನಾ ಕಡೆಗಳಲ್ಲಿ ಇರುವ ನೀರಿನ ಸಮಸ್ಯೆ ತಗ್ಗಲಿದೆ ಎಂದು ಕರಡೋಣ ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಂದಲಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net